ಪ್ರೀತಿಯ ಸಂಜೀವಿನಿ....ಹೇಗಿದ್ದಿಯ...?!
ನಾವು ಬಹಳಷ್ಟು ಬಾರಿ , " ಆ ಕೆಲಸಾನಾ , ಅದು ನನ್ನ ಕಾಲ ಕಿರು ಬೆರಳಿಗೂ ಸಮ ಇಲ್ಲ, ಮಾಡಿ ಬಿಸಾಕ್ತೇನೆ", ಹಾಗೆ, ಹೀಗೆ, ಅಂತಾ ಕೊರಳ ಪಟ್ಟಿಯನ್ನು ಮೇಲಕ್ಕೆ ಏರಿಸಿ ಬೊಬ್ಬೆ ಹೊಡೆಯುತ್ತಿರುತ್ತೇವೆ. ಹೃದಯಕ್ಕೆ ಮತ್ತು ಕಾಲ ಬೆರಳಿಗೆ ಅಜಗಜಾಂತರ ವ್ಯತ್ಯಾಸವನ್ನೇ ಕಲ್ಪಿಸಿಬಿಟ್ಟಿದ್ದೇವೆ. ನಮ್ಮ ದೇಹದ ಅಂಗಗಳಲ್ಲೇ ತಾರತಮ್ಯ ಮಾಡುವ ನಾವು " ಸಮಾನ ಸಮಾಜ" ವನ್ನ ಸೃಷ್ಟಿಸಲಿಕ್ಕಾದರೂ ಹೇಗೆ ಸಾದ್ಯ ಹೇಳು?! ಇರಲಿ ಬಿಡು,
ಮೊನ್ನೆ ಜೀವದ ಗೆಳೆಯ ರಾಘು ನ ಬಲ ಕಾಲಿನ ಪಾದದ ಮೇಲೆ ಬೆಂಗಳೂರಿನ ಸಿಟಿ ಬಸ್ಸೊಂದು ತನ್ನ ಚಕ್ರಗಳಿಂದ ಪಾದ ಪೂಜೆ ಮಾಡಿತು. ಬಲ ಕಾಲಿನ ಎರಡು ಬೆರಳುಗಳು ಪೂರ್ತಿ ಅಪ್ಪಚ್ಚಿಯಾದವು. ಇನ್ನೆರಡು ಬೆರಳುಗಳ ಮೂಳೆ ಮುರಿಯಿತು. ಸದ್ಯಕ್ಕೆ, 'ಹೆಬ್ಬೆರಳು' ಅವನ ಕಾಲಿನಲ್ಲಿದೆ. ಅವನನ್ನ ಆ ಸ್ಥಿತಿಯಲ್ಲ್ಲಿ ನೋಡುವವರೆವಿಗೂ ನನಗರ್ಥವಾಗಿರಲಿಲ್ಲ ನಮ್ಮ ದೇಹದ ಪ್ರತಿಯೊಂದು ಭಾಗವೂ ಎಸ್ಟು ಮುಖ್ಯ ಅಂತ.
'ಪುಟ್ಟು' ಈ ಸ್ಥೀಮಿತ ಅವಧಿಯ ಬದುಕಿನಲ್ಲಿ ಎಸ್ಟೊಂದು ಬಗೆಯ ಅಪಘಾತಗಳು ಸಂಭವಿಸುತ್ತವೆ ಅಲ್ವಾ?! ಮಾನಸಿಕವಾಗಿ...ದೈಹಿಕವಾಗಿ... ! ಎತ್ತಿ ಮುದ್ದಾಡಿದ ಅಮ್ಮಾಳ ಕೈಗಳಿಗೆ ಪ್ಯಾರಲಿಸಿಸ್ ಅಟ್ಯಕ್ಕ್ಆಗುತ್ತೆ, ಅಪ್ಪ ಸುಳಿವಿಲ್ಲದೆ ಸತ್ತು ಹೋಗ್ತಾನೆ, ಬೆಳೆದ ಮಗ ಅಪಘಾತ ದಲ್ಲಿ ತೀರಿ ಹೋಗ್ತಾನೆ, ಕೆಲವರು ಹಾದಿ ತಪ್ತಾರೆ, ಸಂಪತ್ತು ಕರಗಿ ಉತ್ತಮ ಅಂತಸ್ತಿನ ಜನರು ಬೀದಿಗೆ ಬೀಳ್ತಾರೆ, ನಂಬಿದ ಗೆಳೆಯ ಮೋಸ ಮಾಡಿ ಬಿಡ್ತಾನೆ, ಪ್ರೀತಿಸಿದ ಹುಡುಗಿಗೆ ಬೇರೆಯವನೋಟ್ಟಿಗೆ ಮದುವೆ ನಿಶ್ಚಯವಾಗಿರುತ್ತೆ, ಪರೀಕ್ಷೆಯಲ್ಲಿ ನಿರೀಕ್ಷೆಯ ಫಲಿತಾಂಶ ತಲೆ ಕೆಳಕಾಗಿರುತ್ತೆ, ಮುದ್ದು ನಾಯಿ ಮರಿ ಸತ್ತು ಹೋಗುತ್ತೆ, ಸಂಬಂದ ಗಳ ಸ್ವರೂಪವೇ ಬದಲಾಗಿಬಿಡುತ್ತೆ....ಅಬ್ಬಾ?!!!!!!!!!!! ನೆನೆಸಿಕೊಂಡರೆ ಮೈ ಜುಮ್ಮೆನ್ನುತ್ತದೆ. ಈ ಆಘಾತಗಳೇ ಬದುಕನ್ನ ಕುಬ್ಜ ಗೊಳಿಸುತ್ತವೆ..ಬದುಕಿನ ಪ್ರೀತಿಯನ್ನೇ ಬತ್ತಿಸಿಬಿಡುತ್ತವೆ.
ಪುಟ್ಟು, ಈ ಆಘಾತಗಳಿಗಿಂತ " ಬದುಕು" ದೊಡ್ದದಲ್ವಾ..?! ಅದು "ಅನಂತತೆಯ ಆಗರ", ಈ ಆಘಾತಗಳು , ಕ್ಷುಲ್ಲಕ , ಕ್ಷಣಿಕವಾದುವು..ಇಂತಹುಗಳಿಂದ ನಮ್ಮ ಜೀವನ ಪ್ರೀತಿಯನ್ನು, ಉತ್ಸಾಹ ಸಾಗರವನ್ನು ಬತ್ತಿಸಿಕೊಳ್ಳಬಾರದು..,ಜಾಗೃತರಾಗಬೇಕು ,ಅಂದಾಗ ಮಾತ್ರ ಸಂಭವಿಸುವ ದೊಡ್ಡ ದೊಡ್ಡ ಅಘಾತಗಳನ್ನ ತಪ್ಪಿಸ್ಲಿಕ್ಕೆ ಸಾದ್ಯ..ಇಂತಹ ಸಂಧರ್ಭ ಗಳಲ್ಲೇ ನಾವು ವಿಧಿ ಗೆ ಸವಾಲು ಎಸೆಯಬೇಕು....