ಡಿಯರ್ ಪ್ರೆಂಡ್ಸ್ ನಮಸ್ತೆ,
ಪ್ರತಿ ಕ್ಷಣ ಬದುಕನ್ನ, ಈ ಪ್ರಪಂಚವನ್ನ ಮತ್ತು ನನ್ನನ್ನ ಪ್ರೀತಿಸುವ ಮನುಷ್ಯ ನಾನು. "ನನ್ನನ್ನ ನಾನು ಪ್ರೀತಿಸುವುದಕ್ಕೆ ಸಾಧ್ಯ ಆದರೆ ಇಡೀ ಜಗತ್ತನ್ನು ಮತ್ತು ಮಿಕ್ಕೆಲ್ಲವನ್ನೂ ಪ್ರೀತಿಸಬಹುದು" ಎಂಬುದು ನನ್ನ ನಂಬಿಕೆ. ಈ ಪ್ರೀತಿಯ ಯಾನದಲ್ಲಿ ನೂರಾರು ಭಾವಗಳು ನನ್ನನ್ನ ಪುಳಕಿತವನ್ನಗಿ ಮಾಡಿವೆ. ಆತ್ಮ ಶಕ್ತಿ ಮತ್ತು ಆತ್ಮ ಗೌರವಗಳೇ ನನ್ನ ಶಕ್ತಿ. ಇವು ಕೆಲವರಿಗೆ ಸಾಧನೆಯಾಗಿ, ಮತ್ತೆ ಕೆಲವರಿಗೆ ಸ್ಪೂರ್ತಿಯಾಗಿ , ಕೆಲವರಿಗೆ ಅಹಂಕಾರವಾಗಿ ಕಂಡಿವೆ. ಅವರವರ ಭಾವಕ್ಕೆ ಅವರವರ ಪ್ರೀತಿಗೆ " ನನ್ನ ಕನ್ನಡಿಯ ಬಿಂಬ " ಕಂಡಿದೆ. ಆದರೆ ನನಗನಿಸುವುದಿಸ್ಟೇ . ನನ್ನ ಬಳಿ ಹಲವು ಕಾಲಿ ಕಾಗದಗಳಿವೆ , ಒಂದು ಲೇಖನಿ ಇದೆ ಮತ್ತು ನಾನಿದ್ದೇನೆ.
ಹಾಗಾಗಿಯೇ ನನಗನಿಸಿದ ಭಾವನೆಗಳು, ನಾನು ಕಂಡು ಕೊಂಡ ಸತ್ಯಗಳು, ನನ್ನ ಅನುಭವಕ್ಕೆ ನಿಲುಕಿದ ಸಂಗತಿಗಳನ್ನು " ವಿಶ್ವಮುಖಿ " ಯಾಗಿ ಇಲ್ಲಿ ದಾಖಲಿಸುತ್ತಿದ್ದೇನೆ. ನಿಮಗನಿಸಿದ್ದನ್ನು ಖಂಡಿತ ತಿಳಿಸಿ. ತಿಳಿಯುವುದು , ಬೆಳೆಯುವುದು, ಗೊತ್ತಿರುವುದ ಹಂಚಿಕೊಳ್ಳುವುದು, ಜೊತೆಗೂಡಿ ನಡೆಯುವುದು ವಿಶ್ವಮುಖಿಯ ಯಾನದ ಅವಿಬಾಜ್ಯ ಅಂಗಗಳು.
೦೧. ನಾನು ಸಮಾಧಾನಿಸುವವರೆಗಿನ ಕಣ್ಣೀರನ ಹೊಣೆ ನನ್ನದು. ನಂತರ ನೀ ಸುರಿಸುವ ಕಣ್ಣೀರಿಗೂ, ನನಗೂ ಸಂಬಂಧವಿಲ್ಲ. ನಮ್ಮ ಸಂಬಂಧದ ಅನೂನ್ಯತೆ ಇಸ್ಟೇ ಎಂದು ತಿಳಿಯುವೇನು.
೦೨. ಕೆಲವು ಸಂಕಟಗಳು/ನೋವುಗಳು ನಮ್ಮ ಗುರುಗಳು. ಅವು ನಮ್ಮನ್ನ ಅರ್ಥೈಸಿಕೊಳ್ಳಲು , ತಿದ್ದಿಕೊಳ್ಳಲು, ಮುನ್ನಡೆಯಲು ಅನುಕೂಲಕರ.
೦೩. ಪ್ರೀತಿ ಒಂದು ಕ್ರಿಯೆ ಅಲ್ಲ. ಅದು ನನಗೆ ಉಸಿರಾಟದಸ್ಟೇ ಸಹಜ .
೦೪. ಭಗ್ನ ಪ್ರೀತಿಯು ಕೂಡ ಸಾಧನೆಗೆ ಸ್ಪೂರ್ಥಿಯಾಗಬಲ್ಲದು.
1 comment:
ಬ್ಲಾಗ್ ಲೋಕಕ್ಕೆ ಸ್ವಾಗತ.
ತಮ್ಮ ೧,೨,೩ ಮತ್ತು ೪ ಚೆನ್ನಾಗಿವೆ.
ತಮ್ಮ ಪರಿಚಯ ಚೆನ್ನಾಗಿ ಮಾಡಿದ್ದಿರಾ..ಆತ್ಮಗೌರವ ಅವಶ್ಯ ಆದರೆ ಅದು ಆತ್ಮ ಸ್ತುತಿ ಆದಾಗ ಜನರಿಗೆ ಅಹ೦ಕಾರವಾಗಿ ಕಾಣಬಹುದು ಎಂಬುದು ನನ್ನ ಅಭಿಪ್ರಾಯ.
ಬ್ಲಾಗ್ ಸ್ನೇಹ ಬೆಳೆಯಲಿ
Post a Comment