Thursday, September 30, 2010

"ಹಸಿವು ಬದುಕಿನ ಪಾಟ ಕಲಿಸುತ್ತವೆ, ಕಷ್ಟಗಳು ಸಾಧನೆಗೆ ಮುನ್ನುಡಿ ಹಾಡುತ್ತವೆ".

"ಹಸಿವು ಬದುಕಿನ ಪಾಟ ಕಲಿಸುತ್ತವೆ, ಕಷ್ಟಗಳು ಸಾಧನೆಗೆ ಮುನ್ನುಡಿ ಹಾಡುತ್ತವೆ".  ಈ ಸಾಲನ್ನು ನಾನು ಬರೆಯಲಿಕ್ಕೆ ಸಾಧ್ಯವಾದುದು , ಒಬ್ಬ ಬಿಹಾರಿ ಮಿತ್ರನ ಅನುಭವದಿಂದ.




ಚರಿತ್ರೆ (ಇತಿಹಾಸ ) ವುಳ್ಳ , ಚಾರಿತ್ರ್ಯ ವಿಲ್ಲದ ರಾಜ್ಯ ಬಿಹಾರ .ಬಿಹಾರ ಭಾರತೀಯ ಇತಿಹಾಸಕ್ಕೆ ತನ್ನದೇ ಆದ ಕೊಡುಗೆ ನೀಡಿದೆ. ಹಾಗೆಯೇ ಕ್ರೌರ್ಯ ಮತ್ತು ತನ್ನ  ಅಸಂಸ್ಕೃತಿ ಯಿಂದ ಮನೆಮಾತಾಗಿದೆ . ಆದರೂ ಅಲ್ಲಿನ ಜನ ದೇಶದ ಅತ್ಯುನ್ನತ ಹುದ್ದೆಗಳಾದ ನಾಗರಿಕ ಸೇವೆಗಳನ್ನು ಅಲಂಕರಿಸುತ್ತಿದ್ದಾರೆ. ರೈಲ್ವೆ ಇಲಾಖೆಯಲ್ಲಿ ತುಂಬಿ ತುಳುಕುತ್ತಿದ್ದಾರೆ. ಬಿಹಾರ ರಾಜ್ಯದಲ್ಲಿ ಯಾವ ಹೊತ್ತು ಯಾವ ಅನಾಹುತ ಘಟಿಸುತ್ತದೋ ಹೇಳಲಿಕ್ಕಾಗದು. ಶೇ 85 ರಷ್ಟು ಹಳ್ಳಿಗಳು ಬಿಹಾರವನ್ನು ಆವರಿಸಿವೆ. ಹಿಂದುಳಿದ ರಾಜ್ಯ . ಇಸ್ಟೆಲ್ಲಾ ಇದ್ದು ಇದೆಲ್ಲ ಬಿಹಾರಿಗಳಿಗೆ ಸಾದ್ಯವಾದುದಾದರೂ ಹೇಗೆ ?! 

ನನ್ನ ಬಿಹಾರಿ ಗೆಳೆಯ ಕೊಟ್ಟ ಉತ್ತರ ಇಸ್ಟೇ ," ಡಿಯರ್ ಪ್ರೆಂಡ್ ಬಿಹಾರದಲ್ಲಿ ವಿದ್ಯುತ್ ಪೂರೈಕೆ ಸರಿ ಇಲ್ಲ ಅಂಡ್ ಇಟ್  ಇಸ್ ನಾಟ್ ಎ   ಕಲ್ಚರಡ್    ಸ್ಟೇಟ್ . ಜನಗಳ ಬಳಿ ದುಡ್ಡಿಲ್ಲ. ಮೂರು ನಾಲ್ಕು ಜನ ಯೂಥ್ಸ್ ಒಂದು ಕಡೆ ಸೇರಿ ಓದಿಕೊಳ್ತೇವೆ. ಸ್ಪರ್ದಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸ್ತೇವೆ. ಎಲ್ಲಾ ತರದ ಪರೀಕ್ಷೆ ತಕ್ಕೊಲ್ತೆವೆ. ಮೊದಲನೇ ಸಲ ಆಗದೆ ಇದ್ದರೆ , ಎರಡು ಅಥವಾ ಮೂರನೇ ಪ್ರಯತ್ನದಲ್ಲಿ ವಿಜಯ ನಮಗೊಲಿಯುತ್ತದೆ. ಹೊಟ್ಟೆ ತುಂಬಿದರೆ ಯಾವ ಯೋಚನೆ ಕೂಡ ತಲೆಗೆ ಹತ್ತದು. ಮನರಂಜನೆ ಇದ್ದರೆ ಯಾವ ಚಿಂತೆ ಕೂಡ ಸುಳಿಯದು. ಇದು ಯಾವುದು ಬಿಹಾರದಲ್ಲಿಲ್ಲ. ಅಸ್ಟೊಂದು ಸಮಯ ಏನ್ ಮಾಡೋದು.... ಪ್ರಿಪೇರ್   , ಪ್ರಿಪೇರ್ ,ಪ್ರಿಪೇರ್ ಅಂಡ್ ವೀ ಗಾಟ್ ಸಕ್ಸೆಸ್ ."

ನಿಜಕ್ಕೂ ಆತನ ಮಾತು ನನ್ನಲ್ಲಿ ಸ್ಫೂರ್ತಿ ತುಂಬಿತು. ಎಲ್ಲಾ ಸರಿಯಿದ್ದೂ ಸಾಧಿಸುವವರೇ ವಿರಳ . ಅಂತದ್ದರಲ್ಲಿ ತಮ್ಮ ರಾಜ್ಯದ ದೌರ್ಭಾಗ್ಯವನ್ನು ,ದುರ್ಬಲತೆಯನ್ನು ಹಳಿಯದೆ ಅದನ್ನೇ ಸಕಾರಾತ್ಮಕವಾಗಿ ತೆಗೆದುಕೊಂಡು ಸಾಧಿಸಿದ್ದಾರೆ . ನಾವು ಕೂಡ ಅದೆ ಹಾದಿಯಲ್ಲಿ ಸಾಗೋಣ. ಸಾಧನೆಯ ಹಾದಿಗೆ ನಮ್ಮ ಕರ್ನಾಟಕ ಪೂರಕವಾಗಿದೆ. ಆದರೆ ನಮ್ಮ ಮನಸ್ಸುಗಳು ಬದಲಾಗಬೇಕಿದೆ. ಕನ್ನಡ ಭಾಷೆಯ ಪ್ರೇಮದೊಟ್ಟಿಗೆ  ಇತರ ಭಾಷೆಯ ಜ್ಞಾನ ವನ್ನು ಮೈ ಗೂಡಿಸಿಕೊಳ್ಳೋಣ. ಬೆಳೆಯೋಣ. ಈ ಜಗಕೆ ಬೆಳಕಾಗೋಣ.

4 comments:

ಸೀತಾರಾಮ. ಕೆ. / SITARAM.K said...

ಅಸಿದವನಿಗೆ ಅನ್ನದ ರುಚಿ ಮತ್ತು ಅವಶ್ಯಕತೆ ಗೊತ್ತಾಗೋದು ಮತ್ತು ಅದನ್ನ ಸಂಪಾದಿಸೋ ಕಿಚ್ಚು ಬರೋದು!
ಚೆಂದದ ಲೇಖನ.

*ಚುಕ್ಕಿ* said...

ಹೌದು...ಹಸಿವು, ಬಡತನ, ಅವಮಾನ ಗಳೆಂಬ ಕಿಚ್ಚನ್ನು ಆತ್ಮವಿಶ್ವಾಸದಿಂದ ನಮ್ಮ ಬಾಳ ಬೆಳಗಿಸುವ ಜ್ಯೋತಿಯನ್ನಾಗಿ ಪರಿವರ್ತಿಸಬೇಕು. ಆಗ ಸಾಧನೆ ನಮ್ಮನ್ನು ಹುಡುಕಿಕೊಂಡು ಬರುತ್ತದೆ. ಧನ್ಯವಾದಗಳು ಸೀತಾರಾಂ ಜಿ.

ನನ್ನ ಮನದ ಭಾವಕೆ ಕನ್ನಡಿ ಹಿಡಿದಾಗ said...

howdu nimma matu nija ...:)

tumkur s.prasd said...

ಬರಹ ಚನ್ನಾಗಿದೆ,