Sunday, October 26, 2008

ವಿವೇಕ ಕಿಡಿ..ಸೇವೆಗೆ ಕರೆ


" ಐಶ್ವರ್ಯ ಹೀನರಾದ,  ನಿರ್ಭಾಗ್ಯರಾದ     , ವಿವೇಚನಾ ಶಕ್ತಿಯನ್ನು ಕಳೆದುಕೊಂಡು ಪದದಳಿತರಾದ, ಉಪವಾಸದಿಂದ ನರಳುವ,  ಕಾದಾಡಿ  ಅಸೂಯೆ ಪಡುವ ನಮ್ಮ ದೇಶದವರನ್ನು ಪ್ರೀತಿಸಿದರೆ, ಅವರು ಮತ್ತೊಮ್ಮೆ ಮೇಲೆ ಏಳುವರೆಂದು    ನಾನು ನಂಬುತ್ತೇನೆ. ನೂರಾರು ಜನ ಉದಾರ ಹೃದಯರಾದ ಸ್ತ್ರೀ ಪುರುಷರು ಜೀವನದ ಸುಖ ವನ್ನು ಅನುಭವಿಸಬೇಕೆಂಬ ಆಸೆ ಎಲ್ಲವನು  ತೊರೆದು, ಬಡತನ ಅಜ್ಞಾನ ಕೂಪದಲ್ಲಿ ದಿನೇ ದಿನೇ ಆಳ ಆಳಕ್ಕೆ ಮುಳುಗುತ್ತಿರುವ ನಮ್ಮ ನಾಡಿನ ಲಕ್ಷಾಂತರ ಜನರ ಹಿತಕ್ಕೊಸುಗವಾಗಿ ತವಕಿಸಿ ಯಾವಾಗ ಕೈಲಾದ ಮಟ್ಟಿಗೆ ಕಸ್ಟ  ಪಡುವರೋ  , ಆಗ ಮಾತ್ರ ಭರತ  ಖಂಡ  ಮೇಲೆ ಏಳುವುದು" ........ಸ್ವಾಮಿ ವಿವೇಕಾನಂದರು 

ಪ್ರೀತಿಯ ಪುಟ್ಟು , 

ದೊಡ್ಡವರು ಹೇಳಿರೋ ಮಾತ್ ಗಳನ್ನೆಲ್ಲ ಕಾರ್ಯರೂಪಕ್ಕೆ ತಂದರೆ ಈ ಸಮಾಜ, ಪರಿಸರ, ನಮ್ಮ ಮನೆ - ಮನಸ್ಸು ಎಷ್ಟು ಚಂದ ಇರುತ್ತಲ್ವಾ...?! ಅದೇ ಪ್ರಯತ್ನದಲ್ಲಿ  ನಮ್ಮ ಬದುಕಿನ ಗಾಲಿ ಚಲಿಸುತ್ತಿರಬೇಕು. ಏನಂತೀಯ..?!!!!!!!!   

ಇತಿ,
ನಿನ್ನ ಚುಕ್ಕಿ

Wednesday, May 28, 2008

ಚಿಕ್ಕ ಪುಟ್ಟ ಅಪಘಾತಗಳು ಆತ್ಮವಿಶ್ವಾಸವನ್ನು ಹೆಚ್ಸಿಸಲಿ ....ದೊಡ್ಡ ಆಘಾತಗಳನ್ನು ತಪ್ಪಿಸಲಿ..

ಪ್ರೀತಿಯ ಸಂಜೀವಿನಿ....ಹೇಗಿದ್ದಿಯ...?!

ನಾವು ಬಹಳಷ್ಟು ಬಾರಿ , " ಆ ಕೆಲಸಾನಾ , ಅದು ನನ್ನ ಕಾಲ ಕಿರು ಬೆರಳಿಗೂ ಸಮ ಇಲ್ಲ, ಮಾಡಿ ಬಿಸಾಕ್ತೇನೆ", ಹಾಗೆ, ಹೀಗೆ, ಅಂತಾ ಕೊರಳ ಪಟ್ಟಿಯನ್ನು ಮೇಲಕ್ಕೆ ಏರಿಸಿ ಬೊಬ್ಬೆ ಹೊಡೆಯುತ್ತಿರುತ್ತೇವೆ. ಹೃದಯಕ್ಕೆ ಮತ್ತು ಕಾಲ ಬೆರಳಿಗೆ ಅಜಗಜಾಂತರ ವ್ಯತ್ಯಾಸವನ್ನೇ ಕಲ್ಪಿಸಿಬಿಟ್ಟಿದ್ದೇವೆ. ನಮ್ಮ ದೇಹದ ಅಂಗಗಳಲ್ಲೇ ತಾರತಮ್ಯ ಮಾಡುವ ನಾವು " ಸಮಾನ ಸಮಾಜ" ವನ್ನ ಸೃಷ್ಟಿಸಲಿಕ್ಕಾದರೂ ಹೇಗೆ ಸಾದ್ಯ ಹೇಳು?! ಇರಲಿ ಬಿಡು,

ಮೊನ್ನೆ ಜೀವದ ಗೆಳೆಯ ರಾಘು ನ ಬಲ ಕಾಲಿನ ಪಾದದ ಮೇಲೆ ಬೆಂಗಳೂರಿನ ಸಿಟಿ ಬಸ್ಸೊಂದು ತನ್ನ ಚಕ್ರಗಳಿಂದ ಪಾದ ಪೂಜೆ ಮಾಡಿತು. ಬಲ ಕಾಲಿನ ಎರಡು ಬೆರಳುಗಳು ಪೂರ್ತಿ ಅಪ್ಪಚ್ಚಿಯಾದವು. ಇನ್ನೆರಡು ಬೆರಳುಗಳ ಮೂಳೆ ಮುರಿಯಿತು. ಸದ್ಯಕ್ಕೆ, 'ಹೆಬ್ಬೆರಳು' ಅವನ ಕಾಲಿನಲ್ಲಿದೆ. ಅವನನ್ನ ಆ ಸ್ಥಿತಿಯಲ್ಲ್ಲಿ ನೋಡುವವರೆವಿಗೂ ನನಗರ್ಥವಾಗಿರಲಿಲ್ಲ ನಮ್ಮ ದೇಹದ ಪ್ರತಿಯೊಂದು ಭಾಗವೂ ಎಸ್ಟು ಮುಖ್ಯ ಅಂತ.

'ಪುಟ್ಟು' ಈ ಸ್ಥೀಮಿತ ಅವಧಿಯ ಬದುಕಿನಲ್ಲಿ ಎಸ್ಟೊಂದು  ಬಗೆಯ ಅಪಘಾತಗಳು ಸಂಭವಿಸುತ್ತವೆ ಅಲ್ವಾ?! ಮಾನಸಿಕವಾಗಿ...ದೈಹಿಕವಾಗಿ... ! ಎತ್ತಿ ಮುದ್ದಾಡಿದ ಅಮ್ಮಾಳ ಕೈಗಳಿಗೆ ಪ್ಯಾರಲಿಸಿಸ್ ಅಟ್ಯಕ್ಕ್ಆಗುತ್ತೆ, ಅಪ್ಪ ಸುಳಿವಿಲ್ಲದೆ  ಸತ್ತು ಹೋಗ್ತಾನೆ, ಬೆಳೆದ ಮಗ ಅಪಘಾತ ದಲ್ಲಿ ತೀರಿ ಹೋಗ್ತಾನೆ, ಕೆಲವರು ಹಾದಿ ತಪ್ತಾರೆ, ಸಂಪತ್ತು ಕರಗಿ ಉತ್ತಮ ಅಂತಸ್ತಿನ ಜನರು ಬೀದಿಗೆ ಬೀಳ್ತಾರೆ, ನಂಬಿದ ಗೆಳೆಯ ಮೋಸ ಮಾಡಿ ಬಿಡ್ತಾನೆ, ಪ್ರೀತಿಸಿದ ಹುಡುಗಿಗೆ ಬೇರೆಯವನೋಟ್ಟಿಗೆ ಮದುವೆ ನಿಶ್ಚಯವಾಗಿರುತ್ತೆ, ಪರೀಕ್ಷೆಯಲ್ಲಿ ನಿರೀಕ್ಷೆಯ ಫಲಿತಾಂಶ ತಲೆ ಕೆಳಕಾಗಿರುತ್ತೆ, ಮುದ್ದು ನಾಯಿ ಮರಿ ಸತ್ತು ಹೋಗುತ್ತೆ, ಸಂಬಂದ ಗಳ ಸ್ವರೂಪವೇ ಬದಲಾಗಿಬಿಡುತ್ತೆ....ಅಬ್ಬಾ?!!!!!!!!!!! ನೆನೆಸಿಕೊಂಡರೆ ಮೈ ಜುಮ್ಮೆನ್ನುತ್ತದೆ. ಈ ಆಘಾತಗಳೇ ಬದುಕನ್ನ ಕುಬ್ಜ ಗೊಳಿಸುತ್ತವೆ..ಬದುಕಿನ ಪ್ರೀತಿಯನ್ನೇ ಬತ್ತಿಸಿಬಿಡುತ್ತವೆ.

ಪುಟ್ಟು, ಈ ಆಘಾತಗಳಿಗಿಂತ " ಬದುಕು" ದೊಡ್ದದಲ್ವಾ..?! ಅದು "ಅನಂತತೆಯ ಆಗರ", ಈ ಆಘಾತಗಳು , ಕ್ಷುಲ್ಲಕ , ಕ್ಷಣಿಕವಾದುವು..ಇಂತಹುಗಳಿಂದ ನಮ್ಮ ಜೀವನ ಪ್ರೀತಿಯನ್ನು, ಉತ್ಸಾಹ ಸಾಗರವನ್ನು ಬತ್ತಿಸಿಕೊಳ್ಳಬಾರದು..,ಜಾಗೃತರಾಗಬೇಕು ,ಅಂದಾಗ ಮಾತ್ರ ಸಂಭವಿಸುವ ದೊಡ್ಡ ದೊಡ್ಡ ಅಘಾತಗಳನ್ನ ತಪ್ಪಿಸ್ಲಿಕ್ಕೆ ಸಾದ್ಯ..ಇಂತಹ ಸಂಧರ್ಭ ಗಳಲ್ಲೇ ನಾವು ವಿಧಿ ಗೆ ಸವಾಲು ಎಸೆಯಬೇಕು....

Tuesday, April 29, 2008

ನಾವು ಆಗಬೇಕಾದದ್ದು....

ಪ್ರೀತಿಯ ಪುಟ್ಟು.......


ಪ್ಪಾಅಮ್ಮಂದಿರಿಗೆ ತಮ್ಮ ಮಕ್ಕಳ ಬಗ್ಗೆ ಎಸ್ಟೊಂದು ನೀರಿಕ್ಷೆಗಳಲ್ಲವಾ ?! ತನ್ನ ಮಗ/ಮಗಳು ಅದಾಗಬೇಕು, ಇದಾಗಬೇಕು,ಹಂಗಿರಬೇಕು,ಹಿಂಗಿರಬೇಕು.....ಅಬ್ಬಾ!, ತಮ್ಮ ಕರುಳ ಕುಡಿಗಳ ಬಗ್ಗೆ ಎಸ್ಟೊಂದು ಆಶಾಗೋಪುರ ಕಟ್ಟಿಕೊಂಡಿರ್ತಾರಲ್ವಾ  ?! ಮಕ್ಕಳು ಅದನ್ನು ಜಾವಾಬ್ದಾರಿಯಾಗಿ ಸ್ವೀಕರಿಸಬೇಕು , ಆದರೆ ಒಮ್ಮೆಮ್ಮೆ ಅದೇ ಅವರಿಗೆ bandhana ವಾಗಿ ಬಿಡುತ್ತೆ....ಆದರೆ ಅವರ ಕನಸುಗಳನ್ನ ನನಸಾಗಿಸುವುದು ಮಕ್ಕಳ ಹೊಣೆಗಾರಿಕೆ ಯಾಗಿರ್ಬೇಕು ಅಲ್ವಾ? , " ಮಕ್ಕಳ ಸಣ್ಣ ಪುಟ್ಟ ಕನಸುಗಳಿಗಿಂತ, ಫೋಷಕರಿಗೆ ತಮ್ಮ ಮಕ್ಕಳ ಸುಂದರ ಭವಿಷ್ಯದ ಬಗೆಗೆ ಅಗಾಧ ಕಲ್ಪನೆಗಳಿರ್ತಾವೆ", ಅನ್ನೋದು ನನ್ನ ಭಾವನೆ...ನಿನಗೆ ಏನನ್ನಿಸುತ್ತದೆ  ಪುಟ್ಟು?!

ಪುಟ್ಟು, ನಾವು ಏನಾಗಲು  ಹೊರಟಿದ್ದೇವೆ?! ಸಾಧಿಸ್ತೇವೆ, ದೊಡ್ಡ ಅಂಕಿಯ ಸಂಬಳ ಪಡೀತೀವಿ, ಹೆಸರನ್ನು ಮಾಡ್ತೀವಿ...ಅದ್ರೆ ಎಲ್ಲೋ ಒಂದು ಕಡೆ , ನಮ್ಮ ಸಾಧನೆಗಳ  ನಡುವೆ, ಬದುಕಿನ  ಜಂಜಾಟಗಳ  ನಡುವೆ "ನಮ್ಮತನ" ವನ್ನ ಉಳಿಸಿಕೊಳ್ಳಲು ಹೆಣಗಾಡ್ತೀವಿ , ಸ್ನೇಹಿತರನ್ನ ಮರಿತಿವಿ, ನಗುವುದನ್ನು  ಮರಿತಿವಿ, ಈ ಯಾಂತ್ರಿಕೃತ   ಬದುಕಿನ ಭಾಗ ವಾಗಿ ಹೋಗ್ತಿವಿ. ನಮ್ಮ ಸ್ವಂತಿಕೆ ಯನ್ನೇ ಉಳಿಸಿಕೊಳ್ಳುವುದು ಕಸ್ಟವಾಗುತ್ತೆ. ಇದರ ಎಲ್ಲದರಾಚೆಗೆ ಒಂದು "ಸುಂದರ ಬದುಕು" ಇದೆ , ಎಂಬುದರ ಕಲ್ಪನೆಯ ನಮಗೆ ಇರೋದಿಲ್ಲ.

ದ್ರೆ ಪುಟ್ಟು , ನಾವು ಹಾಗಿರೋದು ಬೇಡ.  ಸ್ವಾರ್ಥಗಳಾಚೆಗಿನ  ,  ಜಂಜಾಟ ಗಳಾಚೆಗಿನ , ಒಂದು "ಸುಂದರ ಬದುಕು"  ಕಟ್ಟಿಕೊಳ್ಳೋಣ........../

ನ್ನ್ನ ಗುರುವರ್ಯ , "ಡಿವಿಜಿ " ಯವರು ,ಹೇಳಿದ್ದು ಇದನ್ನೇ ಅಲ್ಲವೇ.........?!!!!!!!

"ಹುಲ್ಲಾಗು ಬೆಟ್ಟದಡಿ,
ಮನೆಗೆ ಮಲ್ಲಿಗೆಯಾಗು,
ಕಲ್ಲಾಗು ಕಸ್ಟ ಗಳ ಮಳೆಯ ವಿಧಿ ಸುರಿಯೆ,
ಬೆಲ್ಲ ಸಕ್ಕರೆಯಾಗು ,ಧೀನ ದುರ್ಬಲರಿಂಗೆ,
 ಎಲ್ಲರೊಳಗೊಂದಾಗು  ಮಂಕುತಿಮ್ಮ "

ದನ್ನ ನೀ ಮರೆತಿಲ್ಲ ತಾನೆ...?!..........ನಾವು ಆಗಬೇಕಾದದ್ದು ಇದೆ.....ಎಲ್ಲರೋಳಗೊಂದಾಗುವುದು......ನೀ ಜೋತೆಯಲ್ಲಿರು ಅಷ್ಟೆ .......!!!!!!!!!!

ಪ್ರೀತಿಯಿಂದ,
ಚುಕ್ಕಿ...
ಬಿಂದುವಿನಿಂದ ಅನಂತದೆಡೆಗೆ.....
 

Monday, April 28, 2008

ಪ್ರೀತಿಯಿಂದ......

ಆತ್ಮಿಯರೇ.........ನಮಸ್ತೆ.....

ನನ್ನ ದೃಷ್ಟಿಯಲ್ಲಿ   " ಸಾಧನೆ " ಎಂದರೆ, ಅದು ಕೇವಲ ಬಾಹ್ಯ ಸಾಧನೆಗೆ  ಸಂಬಂದಿಸಿದ್ದಲ್ಲ, ಅದು ಅಂತರಂಗಕ್ಕೂ ಅನ್ವಯಿಸುತ್ತದೆ. ಅಂತರಂಗ ಮತ್ತು ಬಹಿರಂಗ ಸಾಧನೆಗಳ  ನಡುವೆ ಸಮತೋಲನ ಸಾದಿಸಿ, ಸಮಚಿತ್ತದ ಬದುಕು ನಡೆಸುವುದೇ "ಅನಂತದೆಡೆಗೆ ಪಯಣ" , ಅದೇ ಮುಕ್ತಿಯ ದಾರಿ. ಈ ನಿಟ್ಟಿನಲ್ಲಿ ಚುಕ್ಕಿ ಈಗ "ವಿಶ್ವಮುಖಿ "ಯಾಗಲು ಹೊರಟಿದ್ದಾನೆ......ಜೊತೆಯಲ್ಲಿ ನೀವಿರಿ........ಪ್ರಯಾಣ ಸಾರ್ಥಕವಾಗಲು.......//
 
ಅಪಾರ ಪ್ರೀತಿಯಿಂದ,
ನಿಮ್ಮವ,
ಚುಕ್ಕಿ....