Tuesday, June 17, 2014

ನಮ್ಮ ಕನಸುಗಳ ದಾರಿ ನೇರವಾಗಿರಬೇಕು.

ಡಿಯರ್ ಹಿತೈಷಿಗಳೇ, ನಮಸ್ಕಾರ..

ಬೆಳಗಿನ ಸಿಹಿ ಯಾದ , ಸವಿಯಾದ ಶುಭ ದಿನ,

ನಾವು ನಡೆವ ದಾರಿ ಯಾವಾಗಲು ಸರಿಯಾಗಿರಬೇಕು. ಎಂತಹುದೇ ಟ್ರಾಪಿಕ್ ಇರಲಿ, ನಮ್ಮ ಲಕ್ಷ್ಯ ಮಾತ್ರ ನಮ್ಮ ಗುರಿ ಕಡೆಗೆ ಇರಬೇಕು. ಅಂದಾಗ ಮಾತ್ರ ಬದುಕಿನಲ್ಲಿ ನಾವು ಅಂದುಕೊಂಡದ್ದನ್ನು ಸಾಧಿಸಲು ಸಾಧ್ಯ. ಅದಕ್ಕೆ ಸಾಕ್ಷಿ ಎಂಬಂತೆ ನಾನೇ ಕ್ಲಿಕ್ಕಿಸಿದ ಈ ಪೋಟೋಗಳನ್ನು ನೋಡಿ. ಹೈವೇ ರಸ್ತೆಯಲ್ಲಿ ಯಾವುದಕ್ಕೂ ಕೇರ್ ಮಾಡದೆ ಸಾಗುತ್ತಿರುವ ಈ ಹಸುಗಳು ಬದುಕಿನ ಪಾಟವನ್ನು ಹೇಳುತ್ತವೆ. 


ನಿಮ್ಮವ 


ಚುಕ್ಕಿ...
ಬಿಂದುವಿನಿಂದ ಅನಂತದೆಡೆಗೆ....

Thursday, June 12, 2014

ಆಗುವುದೆಲ್ಲಾ ಒಳ್ಳೆಯದಕ್ಕಾಗಿಯೆ...

ಡಿಯರ್ ಪ್ರೆಂಡ್ಸ್ ನಮಸ್ಕಾರ, ಗುಡ್ ಮಾರ್ನಿಂಗ್,

ಈ ದಿನದ ಸಿಹಿಮಾತು:

                            ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಹೇಳಿರುವ ಹಾಗೆ ಆಗುವುದೆಲ್ಲಾ ಒಳ್ಳೆಯದಕ್ಕಾಗಿಯೆ ಎಂದು ತಿಳಿಯಬೇಕು. ಒಂದು ಅವಕಾಶ ನಮ್ಮ ತೆಕ್ಕೆ ಯಿಂದ ಸರಿದುಹೋದರೆ, ಅದು ಮತ್ತೊಂದು ಅದಕ್ಕಿಂತ ಉತ್ತಮ ಅವಕಾಶ ನಮಗೆ ಬರುತ್ತದೆಂಬ ಸೂಚನೆ ಎಂಬಂತೆ ಭಾವಿಸಬೇಕು. ನನ್ನ ಬದುಕಿನಲ್ಲು ಅದು ನಡೆದಿದೆ. ಪ್ರೀತಿ ಮತ್ತು ಸಾಧನೆ ಯಲ್ಲಿ.


                                          ನಾನು ಎನ್.ಸಿ. ಸಿ ವಿದ್ಯಾರ್ಥಿ. ಮಹಾರಾಜ ಕಾಲೇಜಿನಲ್ಲಿ ವ್ಯಾಸಂಗ ಮಾಡುವಾಗ ಒಂದು ನ್ಯಾಶನಲ್ ಲೆವೆಲ್ ಕ್ಯಾಂಪ್ ನಲ್ಲಿ ಭಾಗವಹಿಸಲು ಸಂದರ್ಶನಕ್ಕಾಗಿ ಬೆಂಗಳೂರಿಗೆ ಬಂದಿದ್ದೆ. ಆದರೆ ಅದರಲ್ಲಿ ಆಯ್ಕೆಯಾಗಲಿಲ್ಲ. ಆ ಸಂದರ್ಭದಲ್ಲಿ ಅರ್ಮಿ ಅಧಿಕಾರಿ ಯೊಬ್ಬರು ಈ ಮಾತು ಹೇಳಿದ್ದರು. ಕೆಲವೇ ತಿಂಗಳಿನಲ್ಲಿ ಆ ಮಾತು ಸತ್ಯವಾಯಿತು. ಗಣರಾಜ್ಯೋತ್ಸವ ಪೆರೇಡ್ ನಲ್ಲಿ ಭಾಗವಹಿಸುವ ಎನ್.ಸಿ. ಸಿ. ವಿಧ್ಯಾರ್ಥಿಗಳಿಗೆ ತರಭೇತಿ ನೀಡುವ ಡೆಲ್ಲಿಯ ಆರ್ಮಿ ಕ್ಯಾಂಪ್ ನಲ್ಲಿ ಎಡ್ಸ್ ಜಾಗೃತಿ ಕುರಿತಂತೆ ವಿಶೇಷ ಶಿಬಿರದಲ್ಲಿ ಭಾಗವಹಿಸಿದೆ.

                                    ಮತ್ತು ಇನ್ನೊಂದು ದೃಷ್ಟಾಂತ ಪ್ರೀತಿಯದ್ದು. ಪ್ರೀತಿಸುವ ದಿನಗಳಲ್ಲಿ ಆಕೆಯೆ ಬದುಕು-ಭಾವನೆ-ಬವಣೆ ಅನ್ನಿಸುತ್ತಿದ್ದು. ನನ್ನ ಬದುಕಿನ ಅಂಗಳದಿಂದ  ಇದ್ದಕ್ಕಿದ್ದಂತೆ ಬಿಟ್ಟುಹೋಗುವಾಗ "ನನಗಿಂತ ಚಂದದ, ಒಳ್ಳೆಯ ಹುಡುಗಿ ಸಿಗ್ತಾಳೆ" ಅಂತಾ ನನ್ನ ಪ್ರೀತಿಗೆ ಶ್ರದ್ದಾಂಜಲಿ ಅರ್ಪಿಸಿ ಬೀಳ್ಕೊಟ್ಟಳು. ಆ ಮಾತು ಕೂಡ ಸತ್ಯವಾಗಿದೆ. ಮುತ್ತಿನಂತಾ ಮಡದಿ ನನ್ನ ಬದುಕನ್ನ ಬೆಳಗಿಸುತ್ತಿದ್ದಾಳೆ.


                                            ಇದು ನನ್ನ ವೈಯಕ್ತಿಕ ಭಾವ. ಆದರು ನಿಜ ಭಾವ. ಹಾಗಂತ ಎಲ್ಲಾ ಅವಕಾಶಗಳನ್ನು ಮಿಸ್ ಮಾಡ್ಕೋಬ್ಯಾಡಿ. ಕಳೆದ ಸಮಯ , ಅವಕಾಶ ಮತ್ತೆ ಸಿಗಲ್ಲ. ಆದರೆ ಅದಕ್ಕಿಂತ ಉತ್ತಮ ಅವಕಾಶವನ್ನು ಸಾಧ್ಯ ವಾದರೆ ನಾವೆ ಸೃಸ್ಟಿ ಮಾಡಿಕೊಳ್ಳಬೇಕು. ಅಲ್ವಾ... ನಾವೆ ನಮ್ಮ ಬದುಕಿನ ಬ್ರಹ್ಮರಾಗಬೇಕು.


ಇವತ್ತಿಗೆ ಇಸ್ಟು ಸಾಕು. ಲೆಟ್ಸ್ ವಿಷ್ ಯು.. ಹ್ಯ್ವಾವ್ ಅ ಗ್ರೇಟ್ ದಿನ...

ನಿಮ್ಮ ,
ಚುಕ್ಕಿ...

Wednesday, June 11, 2014

ಯಾರನ್ನೆ ಆದರು ಅತಿಯಾಗಿ ಹಚ್ಚಿಕೊಳ್ಳಬಾರದು...

ನಮಸ್ತೆ ಸ್ನೇಹ ಕುಸುಮಗಳಿಗೆ, ಬೆಳಗಿನ ಶುಭಾರಂಬಕ್ಕೆ ನನ್ನ ಗುಡ್ ಲಕ್.

ಪ್ರತಿ ದಿನ ಇನ್ನು ಮುಂದೆ ನನಗನಿಸುವ, ನನ್ನ ಅನುಭವಕ್ಕೆ ಸಿಕ್ಕ ಒಂದೆರಡು ಸಾಲುಗಳನ್ನು ತಮ್ಮ ಮುಂದೆ ಹಂಚಿಕೊಳ್ಳುವ ಅಂತ ಮನಸ್ಸು ಯೋಚಿಸುತ್ತಿದೆ. ಈ ಬೆಳಗಿನ ತಂಪಾದ ಶುಭಹಾರೈಕೆಗಳೊಂದಿಗೆ ನಿಮ್ಮ ದಿನ ಸುಖಮಯವಾಗಿರಲಿ, ಬದುಕು ಸುಂದರವಾಗಲಿ ಎಂಬುದು ನನ್ನ ಅಭಿಲಾಷೆ.

              ಆತ್ಮಿಯರೆ ಯಾರನ್ನೆ ಆದರು ಅತಿಯಾಗಿ ಹಚ್ಚಿಕೊಳ್ಳಬಾರದು. ಅವರ ಈ ಅವಲಂಬನೆ ಅತಿ ಎನಿಸುವ ಕಾಳಜಿ, ಪ್ರೀತಿ ಅಥವಾ ಮತ್ತಿನ್ನೇನೋ ಅಗಿರಬಹುದು, ಅದು ಸುಳ್ಳು, ನಾಟಕ ಅಂತೆನಿಸಿದರೆ ಅದರಿಂದ ಆಗುವ ದು:ಖ , ವೇದನೆ ಅಪಾರ. ಹಾಗಾಗಿ ಎಲೆಯ ಮೇಲಿರುವ ಮಂಜಿನ ಹನಿಯಂತೆ ಕೆಲವರ ಹತ್ತಿರ ನಮ್ಮ ಸಂಬಂಧಗಳಿರಬೇಕು. ಇದೇನು ಯೂನಿವರ್ಸಲ್ ಸತ್ಯ ಅಲ್ಲ. ಆದರೆ ಕೆಲವರಿಗೆ ಅನುಭಕ್ಕೆ ಬಂದಿರುತ್ತದೆ. ಅವರವರ ಭಾವಕ್ಕೆ, ಅವರವರ ಬಕುತಿಕೆ.

ಒಕ್... ಲೆಟ್ಸ್ ಚಿಯರ್ಸ್ ಶುಭ ಗುರುವಾರ,.... ಎನ್ ಜಾಯ್....ಹ್ಯಾವ್ ಅ ಗ್ರೇಟ್ ದಿನ..ನಿಮ್ಮ ,

ಚುಕ್ಕಿ..
ಬಿಂದುವಿನಿಂದ ಅನಂತದೆಡೆಗೆ....

Wednesday, February 5, 2014

ಅಂಧಕಾರ........!!!


 
ಕತ್ತಲ ಹಾದಿಯ ಕನಸುಗಳಲಿ,
ಎಡವಿದ ಹೆಜ್ಜೆಗಳು/ಮೋಸದ ಜನಗಳ ಜಾತ್ರೆಯಲಿ,
ಮೌನದ ಮಾತುಗಳು/


 
ಸ್ವಾರ್ಥದ ಬದುಕಿನ ಜಂಜಾಟದಲಿ,
ನಿರ್ಜೀವ ಭಾವಗಳು/ಹೊಸತನ ಹಾದಿಯ ಅನ್ವೇಷಣೆಯಲಿ,
ಕಾಲೆಳೆಯುವ ಆಮಿಷಗಳು/


ಚದುರಂಗದ ರಾಜಕೀಯ ಆಟದಲಿ,
ಮುಗ್ಗರಿಸಿದ ಮೌಲ್ಯಗಳು/

ವಿಶ್ವಶಾಂತಿಯ ಸಾಧನೆಯಲಿ,
ಎಣ್ಣೆಯಿಲ್ಲದ ದೀಪಗಳು/ಸ್ನೇಹ ಪ್ರೀತಿಯ ಸಾಂಗತ್ಯದಲಿ,
ಮನಸ್ಸುಗಳೆಲ್ಲಾ ದ್ವೀಪಗಳು/

Wednesday, January 1, 2014

ಹೊಸ ದಿನಗಳನ್ನು ಸ್ವಾಗತಿಸೋಣ

ಆತ್ಮೀಯ ಬಂಧುಗಳೇ ಹೊಸ ವರ್ಶದ ಮೊದಲ ದಿನದ ಹಾಯ್,ಹಲೋ,ನಮಸ್ಕಾರ ಅಂಡ್ ಹೊಸ ವರ್ಶಕ್ಕೆ ತಮ್ಮೆಲ್ಲರಿಗು ಸ್ವಾಗತ ,ಶುಭ ಹಾರೈಕೆಗಳು.

                 ಜನ್ಮದಿನ, ಹಳೆ ವರ್ಷದ ಕೊನೆಯ ದಿನ, ಹೊಸ ವರ್ಶದ ಮೊದಲ ದಿನ, ಪ್ರೀತಿ ಅರಳಿದ ದಿನ,ಪ್ರೇಮದ ಬೀಳ್ಕೋಡಿಗೆಯ ದಿನ, ಬಾಳ ಸಂಗಾತಿಯನ್ನು ನೋಡಿದ ದಿನ, ಮದುವೆಯ ದಿನ, ಮೊದಲ ಮಿಲನದ ದಿನ, ಮಕ್ಕಳು ಹುಟ್ಟಿದ ದಿನ, ಅವರ ಸಾಧಿಸಿದ ಯಾವುದೋ ದಿನ, ಆತ್ಮೀಯರು ಅಗಲಿದ ದಿನ, ಹಬ್ಬದ ದಿನ..................ಅಬ್ಬಾ! ಎಸ್ಟೊಂದು ದಿನಗಳು ನಮ್ಮ ಬದುಕಿನಲ್ಲಿ ನೆನಪಾಗಿ ಉಳಿಯಲಿಕ್ಕೆ ಬರುತ್ತವೆ ಅಲ್ವಾ?!

                  ಆತ್ಮಿಯರೆ ನಿಮ್ಮ ಬದುಕಿನ ಸುಂದರ ನೆನಪುಗಳಲ್ಲಿ ಈ ಹೊಸ ವರ್ಶದ ಮೊದಲ ದಿನವು ಸೇರಲಿ. ನೀವು ಬಯಸಿದ ಅವಕಾಶಗಳು ನಿಮಗೆ ಒಲಿದು, ನಿಮ್ಮ ಬದುಕಿನಲ್ಲಿ ಸಂಭ್ರಮ, ಸಾಧನೆ,ಸಂತಸ, ಸಂತೃಪ್ತಿ ನೆಲೆಯೂರಲಿ ಎಂದು ಅಪಾರ ಪ್ರೀತಿಯಿಂದ ಹಾರೈಸುತ್ತೇನೆ.                 

        ಈ ಅಂತರ್ಜಾಲ ಯುಗದಲ್ಲಿ ಎಲ್ಲಾ ಶುಭ ಹಾರೈಕೆಗಳು ಮಿಂಚೆ/ವಾಟ್ಸುಪ್/ಸರ್ಕಲ್/ಸಾಮಾಜಿಕ ತಾಣಗಳು ಇತ್ಯಾದಿ ಮಾಧ್ಯಮಗಳಲ್ಲೆ ವಿನಿಮಯವಾಗುತ್ತವೆ. ಹೃದಯಕ್ಕೆ ಹತ್ತಿರವಾದ ಆತ್ಮೀಯರು ಮಾತ್ರ ಕರೆ ಮಾಡಿ ಕಳೆದ ಬದುಕಿನ ನೆನಪುಗಳ ಜೊತೆ ಹೊಸ ದಿನಗಳಿಗಾಗಿ ಅಕ್ಕರೆಯಿಂದ ಶುಭ ಹಾರೈಸುತ್ತಾರೆ. ನನ್ನ ಬದುಕಿನಲ್ಲಿ ಅಂತಹವರ ಪಟ್ಟಿ ದೊಡ್ಡದಿದೆ. ಅವರಿಗೆಲ್ಲರಿಗು ವಂದನೆಗಳು.

               ನಮ್ಮ ಜಂಜಾಟದ ಬದುಕಿನಲ್ಲಿ ಕೆಲವು ಕ್ಷಣಗಳನ್ನಾದರು ನಮ್ಮ ಆತ್ಮಿಯರಿಗಾಗಿ ಮೀಸಲಿಡೋಣ ಎಂಬುದು ನನ್ನ ಮನದಾಳದ ಇಂಗಿತ. ಆಫ್ಕೋರ್ಸ್ ನೀವು ಇದನ್ನು ಪಾಲಿಸುತ್ತೀರಿ ಎಂದು ನಂಬುತ್ತೇನೆ ಹಾಗು ಪಾಲಿಸಲು ಮನವಿ ಮಾಡುತ್ತೇನೆ.


                     ಈ ವರ್ಶದಲ್ಲೂ ನನ್ನ ಬದುಕಿನ ಗೆಳೆತನದ ಅಂಗಳದಲ್ಲಿ ನಿಮ್ಮ ಹೆಜ್ಜೆಯಿರಲಿ. ಸವಿ ನುಡಿಯಿರಲಿ, ಶುಭ ಕಾಮನೆಗಳಿರಲಿ ಎಂದು ಪ್ರಾರ್ಥಿಸುತ್ತೇನೆ.

೨೦೧೩ ಕ್ಕೆ ಶುಭ ವಿದಾಯ ಹೇಳುತ್ತಾ ಹೊಸ ದಿನಗಳನ್ನು ಅಪಾರ ನೀರಿಕ್ಷೆ/ ಅಕ್ಕರೆಯಿಂದ ಸ್ವಾಗತಿಸೋಣ. ಬನ್ನಿ ಜೊತೆಗೂಡಿ.
ಕನಸುಗಳೊಟ್ಟಿಗೆ ಕೈ ಜೋಡಿಸಿ, ತಾರೆಗಳನ್ನು ಎಟುಕಿಸೋಣ..


ನಿಮ್ಮವ,

ಚುಕ್ಕಿ...
ಬಿಂದುವಿನಿಂದ ಅನಂತದೆಡೆಗೆ......