Tuesday, June 17, 2014

ನಮ್ಮ ಕನಸುಗಳ ದಾರಿ ನೇರವಾಗಿರಬೇಕು.

ಡಿಯರ್ ಹಿತೈಷಿಗಳೇ, ನಮಸ್ಕಾರ..

ಬೆಳಗಿನ ಸಿಹಿ ಯಾದ , ಸವಿಯಾದ ಶುಭ ದಿನ,

ನಾವು ನಡೆವ ದಾರಿ ಯಾವಾಗಲು ಸರಿಯಾಗಿರಬೇಕು. ಎಂತಹುದೇ ಟ್ರಾಪಿಕ್ ಇರಲಿ, ನಮ್ಮ ಲಕ್ಷ್ಯ ಮಾತ್ರ ನಮ್ಮ ಗುರಿ ಕಡೆಗೆ ಇರಬೇಕು. ಅಂದಾಗ ಮಾತ್ರ ಬದುಕಿನಲ್ಲಿ ನಾವು ಅಂದುಕೊಂಡದ್ದನ್ನು ಸಾಧಿಸಲು ಸಾಧ್ಯ. ಅದಕ್ಕೆ ಸಾಕ್ಷಿ ಎಂಬಂತೆ ನಾನೇ ಕ್ಲಿಕ್ಕಿಸಿದ ಈ ಪೋಟೋಗಳನ್ನು ನೋಡಿ. ಹೈವೇ ರಸ್ತೆಯಲ್ಲಿ ಯಾವುದಕ್ಕೂ ಕೇರ್ ಮಾಡದೆ ಸಾಗುತ್ತಿರುವ ಈ ಹಸುಗಳು ಬದುಕಿನ ಪಾಟವನ್ನು ಹೇಳುತ್ತವೆ. 


ನಿಮ್ಮವ 


ಚುಕ್ಕಿ...
ಬಿಂದುವಿನಿಂದ ಅನಂತದೆಡೆಗೆ....

Thursday, June 12, 2014

ಆಗುವುದೆಲ್ಲಾ ಒಳ್ಳೆಯದಕ್ಕಾಗಿಯೆ...

ಡಿಯರ್ ಪ್ರೆಂಡ್ಸ್ ನಮಸ್ಕಾರ, ಗುಡ್ ಮಾರ್ನಿಂಗ್,

ಈ ದಿನದ ಸಿಹಿಮಾತು:

                            ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಹೇಳಿರುವ ಹಾಗೆ ಆಗುವುದೆಲ್ಲಾ ಒಳ್ಳೆಯದಕ್ಕಾಗಿಯೆ ಎಂದು ತಿಳಿಯಬೇಕು. ಒಂದು ಅವಕಾಶ ನಮ್ಮ ತೆಕ್ಕೆ ಯಿಂದ ಸರಿದುಹೋದರೆ, ಅದು ಮತ್ತೊಂದು ಅದಕ್ಕಿಂತ ಉತ್ತಮ ಅವಕಾಶ ನಮಗೆ ಬರುತ್ತದೆಂಬ ಸೂಚನೆ ಎಂಬಂತೆ ಭಾವಿಸಬೇಕು. ನನ್ನ ಬದುಕಿನಲ್ಲು ಅದು ನಡೆದಿದೆ. ಪ್ರೀತಿ ಮತ್ತು ಸಾಧನೆ ಯಲ್ಲಿ.


                                          ನಾನು ಎನ್.ಸಿ. ಸಿ ವಿದ್ಯಾರ್ಥಿ. ಮಹಾರಾಜ ಕಾಲೇಜಿನಲ್ಲಿ ವ್ಯಾಸಂಗ ಮಾಡುವಾಗ ಒಂದು ನ್ಯಾಶನಲ್ ಲೆವೆಲ್ ಕ್ಯಾಂಪ್ ನಲ್ಲಿ ಭಾಗವಹಿಸಲು ಸಂದರ್ಶನಕ್ಕಾಗಿ ಬೆಂಗಳೂರಿಗೆ ಬಂದಿದ್ದೆ. ಆದರೆ ಅದರಲ್ಲಿ ಆಯ್ಕೆಯಾಗಲಿಲ್ಲ. ಆ ಸಂದರ್ಭದಲ್ಲಿ ಅರ್ಮಿ ಅಧಿಕಾರಿ ಯೊಬ್ಬರು ಈ ಮಾತು ಹೇಳಿದ್ದರು. ಕೆಲವೇ ತಿಂಗಳಿನಲ್ಲಿ ಆ ಮಾತು ಸತ್ಯವಾಯಿತು. ಗಣರಾಜ್ಯೋತ್ಸವ ಪೆರೇಡ್ ನಲ್ಲಿ ಭಾಗವಹಿಸುವ ಎನ್.ಸಿ. ಸಿ. ವಿಧ್ಯಾರ್ಥಿಗಳಿಗೆ ತರಭೇತಿ ನೀಡುವ ಡೆಲ್ಲಿಯ ಆರ್ಮಿ ಕ್ಯಾಂಪ್ ನಲ್ಲಿ ಎಡ್ಸ್ ಜಾಗೃತಿ ಕುರಿತಂತೆ ವಿಶೇಷ ಶಿಬಿರದಲ್ಲಿ ಭಾಗವಹಿಸಿದೆ.

                                    ಮತ್ತು ಇನ್ನೊಂದು ದೃಷ್ಟಾಂತ ಪ್ರೀತಿಯದ್ದು. ಪ್ರೀತಿಸುವ ದಿನಗಳಲ್ಲಿ ಆಕೆಯೆ ಬದುಕು-ಭಾವನೆ-ಬವಣೆ ಅನ್ನಿಸುತ್ತಿದ್ದು. ನನ್ನ ಬದುಕಿನ ಅಂಗಳದಿಂದ  ಇದ್ದಕ್ಕಿದ್ದಂತೆ ಬಿಟ್ಟುಹೋಗುವಾಗ "ನನಗಿಂತ ಚಂದದ, ಒಳ್ಳೆಯ ಹುಡುಗಿ ಸಿಗ್ತಾಳೆ" ಅಂತಾ ನನ್ನ ಪ್ರೀತಿಗೆ ಶ್ರದ್ದಾಂಜಲಿ ಅರ್ಪಿಸಿ ಬೀಳ್ಕೊಟ್ಟಳು. ಆ ಮಾತು ಕೂಡ ಸತ್ಯವಾಗಿದೆ. ಮುತ್ತಿನಂತಾ ಮಡದಿ ನನ್ನ ಬದುಕನ್ನ ಬೆಳಗಿಸುತ್ತಿದ್ದಾಳೆ.


                                            ಇದು ನನ್ನ ವೈಯಕ್ತಿಕ ಭಾವ. ಆದರು ನಿಜ ಭಾವ. ಹಾಗಂತ ಎಲ್ಲಾ ಅವಕಾಶಗಳನ್ನು ಮಿಸ್ ಮಾಡ್ಕೋಬ್ಯಾಡಿ. ಕಳೆದ ಸಮಯ , ಅವಕಾಶ ಮತ್ತೆ ಸಿಗಲ್ಲ. ಆದರೆ ಅದಕ್ಕಿಂತ ಉತ್ತಮ ಅವಕಾಶವನ್ನು ಸಾಧ್ಯ ವಾದರೆ ನಾವೆ ಸೃಸ್ಟಿ ಮಾಡಿಕೊಳ್ಳಬೇಕು. ಅಲ್ವಾ... ನಾವೆ ನಮ್ಮ ಬದುಕಿನ ಬ್ರಹ್ಮರಾಗಬೇಕು.


ಇವತ್ತಿಗೆ ಇಸ್ಟು ಸಾಕು. ಲೆಟ್ಸ್ ವಿಷ್ ಯು.. ಹ್ಯ್ವಾವ್ ಅ ಗ್ರೇಟ್ ದಿನ...

ನಿಮ್ಮ ,
ಚುಕ್ಕಿ...

Wednesday, June 11, 2014

ಯಾರನ್ನೆ ಆದರು ಅತಿಯಾಗಿ ಹಚ್ಚಿಕೊಳ್ಳಬಾರದು...

ನಮಸ್ತೆ ಸ್ನೇಹ ಕುಸುಮಗಳಿಗೆ, ಬೆಳಗಿನ ಶುಭಾರಂಬಕ್ಕೆ ನನ್ನ ಗುಡ್ ಲಕ್.

ಪ್ರತಿ ದಿನ ಇನ್ನು ಮುಂದೆ ನನಗನಿಸುವ, ನನ್ನ ಅನುಭವಕ್ಕೆ ಸಿಕ್ಕ ಒಂದೆರಡು ಸಾಲುಗಳನ್ನು ತಮ್ಮ ಮುಂದೆ ಹಂಚಿಕೊಳ್ಳುವ ಅಂತ ಮನಸ್ಸು ಯೋಚಿಸುತ್ತಿದೆ. ಈ ಬೆಳಗಿನ ತಂಪಾದ ಶುಭಹಾರೈಕೆಗಳೊಂದಿಗೆ ನಿಮ್ಮ ದಿನ ಸುಖಮಯವಾಗಿರಲಿ, ಬದುಕು ಸುಂದರವಾಗಲಿ ಎಂಬುದು ನನ್ನ ಅಭಿಲಾಷೆ.

              ಆತ್ಮಿಯರೆ ಯಾರನ್ನೆ ಆದರು ಅತಿಯಾಗಿ ಹಚ್ಚಿಕೊಳ್ಳಬಾರದು. ಅವರ ಈ ಅವಲಂಬನೆ ಅತಿ ಎನಿಸುವ ಕಾಳಜಿ, ಪ್ರೀತಿ ಅಥವಾ ಮತ್ತಿನ್ನೇನೋ ಅಗಿರಬಹುದು, ಅದು ಸುಳ್ಳು, ನಾಟಕ ಅಂತೆನಿಸಿದರೆ ಅದರಿಂದ ಆಗುವ ದು:ಖ , ವೇದನೆ ಅಪಾರ. ಹಾಗಾಗಿ ಎಲೆಯ ಮೇಲಿರುವ ಮಂಜಿನ ಹನಿಯಂತೆ ಕೆಲವರ ಹತ್ತಿರ ನಮ್ಮ ಸಂಬಂಧಗಳಿರಬೇಕು. ಇದೇನು ಯೂನಿವರ್ಸಲ್ ಸತ್ಯ ಅಲ್ಲ. ಆದರೆ ಕೆಲವರಿಗೆ ಅನುಭಕ್ಕೆ ಬಂದಿರುತ್ತದೆ. ಅವರವರ ಭಾವಕ್ಕೆ, ಅವರವರ ಬಕುತಿಕೆ.

ಒಕ್... ಲೆಟ್ಸ್ ಚಿಯರ್ಸ್ ಶುಭ ಗುರುವಾರ,.... ಎನ್ ಜಾಯ್....ಹ್ಯಾವ್ ಅ ಗ್ರೇಟ್ ದಿನ..



ನಿಮ್ಮ ,

ಚುಕ್ಕಿ..
ಬಿಂದುವಿನಿಂದ ಅನಂತದೆಡೆಗೆ....