Thursday, March 31, 2016
Tuesday, June 17, 2014
ನಮ್ಮ ಕನಸುಗಳ ದಾರಿ ನೇರವಾಗಿರಬೇಕು.
ಡಿಯರ್ ಹಿತೈಷಿಗಳೇ, ನಮಸ್ಕಾರ..
ಬೆಳಗಿನ ಸಿಹಿ ಯಾದ , ಸವಿಯಾದ ಶುಭ ದಿನ,
ನಾವು ನಡೆವ ದಾರಿ ಯಾವಾಗಲು ಸರಿಯಾಗಿರಬೇಕು. ಎಂತಹುದೇ ಟ್ರಾಪಿಕ್ ಇರಲಿ, ನಮ್ಮ ಲಕ್ಷ್ಯ ಮಾತ್ರ ನಮ್ಮ ಗುರಿ ಕಡೆಗೆ ಇರಬೇಕು. ಅಂದಾಗ ಮಾತ್ರ ಬದುಕಿನಲ್ಲಿ ನಾವು ಅಂದುಕೊಂಡದ್ದನ್ನು ಸಾಧಿಸಲು ಸಾಧ್ಯ. ಅದಕ್ಕೆ ಸಾಕ್ಷಿ ಎಂಬಂತೆ ನಾನೇ ಕ್ಲಿಕ್ಕಿಸಿದ ಈ ಪೋಟೋಗಳನ್ನು ನೋಡಿ. ಹೈವೇ ರಸ್ತೆಯಲ್ಲಿ ಯಾವುದಕ್ಕೂ ಕೇರ್ ಮಾಡದೆ ಸಾಗುತ್ತಿರುವ ಈ ಹಸುಗಳು ಬದುಕಿನ ಪಾಟವನ್ನು ಹೇಳುತ್ತವೆ.

ನಿಮ್ಮವ

ಚುಕ್ಕಿ...
ಬಿಂದುವಿನಿಂದ ಅನಂತದೆಡೆಗೆ....
ಬೆಳಗಿನ ಸಿಹಿ ಯಾದ , ಸವಿಯಾದ ಶುಭ ದಿನ,
ನಾವು ನಡೆವ ದಾರಿ ಯಾವಾಗಲು ಸರಿಯಾಗಿರಬೇಕು. ಎಂತಹುದೇ ಟ್ರಾಪಿಕ್ ಇರಲಿ, ನಮ್ಮ ಲಕ್ಷ್ಯ ಮಾತ್ರ ನಮ್ಮ ಗುರಿ ಕಡೆಗೆ ಇರಬೇಕು. ಅಂದಾಗ ಮಾತ್ರ ಬದುಕಿನಲ್ಲಿ ನಾವು ಅಂದುಕೊಂಡದ್ದನ್ನು ಸಾಧಿಸಲು ಸಾಧ್ಯ. ಅದಕ್ಕೆ ಸಾಕ್ಷಿ ಎಂಬಂತೆ ನಾನೇ ಕ್ಲಿಕ್ಕಿಸಿದ ಈ ಪೋಟೋಗಳನ್ನು ನೋಡಿ. ಹೈವೇ ರಸ್ತೆಯಲ್ಲಿ ಯಾವುದಕ್ಕೂ ಕೇರ್ ಮಾಡದೆ ಸಾಗುತ್ತಿರುವ ಈ ಹಸುಗಳು ಬದುಕಿನ ಪಾಟವನ್ನು ಹೇಳುತ್ತವೆ.

ನಿಮ್ಮವ

ಚುಕ್ಕಿ...
ಬಿಂದುವಿನಿಂದ ಅನಂತದೆಡೆಗೆ....
Thursday, June 12, 2014
ಆಗುವುದೆಲ್ಲಾ ಒಳ್ಳೆಯದಕ್ಕಾಗಿಯೆ...
ಡಿಯರ್ ಪ್ರೆಂಡ್ಸ್ ನಮಸ್ಕಾರ, ಗುಡ್ ಮಾರ್ನಿಂಗ್,
ಈ ದಿನದ ಸಿಹಿಮಾತು:
ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಹೇಳಿರುವ ಹಾಗೆ ಆಗುವುದೆಲ್ಲಾ ಒಳ್ಳೆಯದಕ್ಕಾಗಿಯೆ ಎಂದು ತಿಳಿಯಬೇಕು. ಒಂದು ಅವಕಾಶ ನಮ್ಮ ತೆಕ್ಕೆ ಯಿಂದ ಸರಿದುಹೋದರೆ, ಅದು ಮತ್ತೊಂದು ಅದಕ್ಕಿಂತ ಉತ್ತಮ ಅವಕಾಶ ನಮಗೆ ಬರುತ್ತದೆಂಬ ಸೂಚನೆ ಎಂಬಂತೆ ಭಾವಿಸಬೇಕು. ನನ್ನ ಬದುಕಿನಲ್ಲು ಅದು ನಡೆದಿದೆ. ಪ್ರೀತಿ ಮತ್ತು ಸಾಧನೆ ಯಲ್ಲಿ.
ನಾನು ಎನ್.ಸಿ. ಸಿ ವಿದ್ಯಾರ್ಥಿ. ಮಹಾರಾಜ ಕಾಲೇಜಿನಲ್ಲಿ ವ್ಯಾಸಂಗ ಮಾಡುವಾಗ ಒಂದು ನ್ಯಾಶನಲ್ ಲೆವೆಲ್ ಕ್ಯಾಂಪ್ ನಲ್ಲಿ ಭಾಗವಹಿಸಲು ಸಂದರ್ಶನಕ್ಕಾಗಿ ಬೆಂಗಳೂರಿಗೆ ಬಂದಿದ್ದೆ. ಆದರೆ ಅದರಲ್ಲಿ ಆಯ್ಕೆಯಾಗಲಿಲ್ಲ. ಆ ಸಂದರ್ಭದಲ್ಲಿ ಅರ್ಮಿ ಅಧಿಕಾರಿ ಯೊಬ್ಬರು ಈ ಮಾತು ಹೇಳಿದ್ದರು. ಕೆಲವೇ ತಿಂಗಳಿನಲ್ಲಿ ಆ ಮಾತು ಸತ್ಯವಾಯಿತು. ಗಣರಾಜ್ಯೋತ್ಸವ ಪೆರೇಡ್ ನಲ್ಲಿ ಭಾಗವಹಿಸುವ ಎನ್.ಸಿ. ಸಿ. ವಿಧ್ಯಾರ್ಥಿಗಳಿಗೆ ತರಭೇತಿ ನೀಡುವ ಡೆಲ್ಲಿಯ ಆರ್ಮಿ ಕ್ಯಾಂಪ್ ನಲ್ಲಿ ಎಡ್ಸ್ ಜಾಗೃತಿ ಕುರಿತಂತೆ ವಿಶೇಷ ಶಿಬಿರದಲ್ಲಿ ಭಾಗವಹಿಸಿದೆ.
ನಾನು ಎನ್.ಸಿ. ಸಿ ವಿದ್ಯಾರ್ಥಿ. ಮಹಾರಾಜ ಕಾಲೇಜಿನಲ್ಲಿ ವ್ಯಾಸಂಗ ಮಾಡುವಾಗ ಒಂದು ನ್ಯಾಶನಲ್ ಲೆವೆಲ್ ಕ್ಯಾಂಪ್ ನಲ್ಲಿ ಭಾಗವಹಿಸಲು ಸಂದರ್ಶನಕ್ಕಾಗಿ ಬೆಂಗಳೂರಿಗೆ ಬಂದಿದ್ದೆ. ಆದರೆ ಅದರಲ್ಲಿ ಆಯ್ಕೆಯಾಗಲಿಲ್ಲ. ಆ ಸಂದರ್ಭದಲ್ಲಿ ಅರ್ಮಿ ಅಧಿಕಾರಿ ಯೊಬ್ಬರು ಈ ಮಾತು ಹೇಳಿದ್ದರು. ಕೆಲವೇ ತಿಂಗಳಿನಲ್ಲಿ ಆ ಮಾತು ಸತ್ಯವಾಯಿತು. ಗಣರಾಜ್ಯೋತ್ಸವ ಪೆರೇಡ್ ನಲ್ಲಿ ಭಾಗವಹಿಸುವ ಎನ್.ಸಿ. ಸಿ. ವಿಧ್ಯಾರ್ಥಿಗಳಿಗೆ ತರಭೇತಿ ನೀಡುವ ಡೆಲ್ಲಿಯ ಆರ್ಮಿ ಕ್ಯಾಂಪ್ ನಲ್ಲಿ ಎಡ್ಸ್ ಜಾಗೃತಿ ಕುರಿತಂತೆ ವಿಶೇಷ ಶಿಬಿರದಲ್ಲಿ ಭಾಗವಹಿಸಿದೆ.
ಮತ್ತು ಇನ್ನೊಂದು ದೃಷ್ಟಾಂತ ಪ್ರೀತಿಯದ್ದು. ಪ್ರೀತಿಸುವ ದಿನಗಳಲ್ಲಿ ಆಕೆಯೆ ಬದುಕು-ಭಾವನೆ-ಬವಣೆ ಅನ್ನಿಸುತ್ತಿದ್ದು. ನನ್ನ ಬದುಕಿನ ಅಂಗಳದಿಂದ ಇದ್ದಕ್ಕಿದ್ದಂತೆ ಬಿಟ್ಟುಹೋಗುವಾಗ "ನನಗಿಂತ ಚಂದದ, ಒಳ್ಳೆಯ ಹುಡುಗಿ ಸಿಗ್ತಾಳೆ" ಅಂತಾ ನನ್ನ ಪ್ರೀತಿಗೆ ಶ್ರದ್ದಾಂಜಲಿ ಅರ್ಪಿಸಿ ಬೀಳ್ಕೊಟ್ಟಳು. ಆ ಮಾತು ಕೂಡ ಸತ್ಯವಾಗಿದೆ. ಮುತ್ತಿನಂತಾ ಮಡದಿ ನನ್ನ ಬದುಕನ್ನ ಬೆಳಗಿಸುತ್ತಿದ್ದಾಳೆ.
ಇದು ನನ್ನ ವೈಯಕ್ತಿಕ ಭಾವ. ಆದರು ನಿಜ ಭಾವ. ಹಾಗಂತ ಎಲ್ಲಾ ಅವಕಾಶಗಳನ್ನು ಮಿಸ್ ಮಾಡ್ಕೋಬ್ಯಾಡಿ. ಕಳೆದ ಸಮಯ , ಅವಕಾಶ ಮತ್ತೆ ಸಿಗಲ್ಲ. ಆದರೆ ಅದಕ್ಕಿಂತ ಉತ್ತಮ ಅವಕಾಶವನ್ನು ಸಾಧ್ಯ ವಾದರೆ ನಾವೆ ಸೃಸ್ಟಿ ಮಾಡಿಕೊಳ್ಳಬೇಕು. ಅಲ್ವಾ... ನಾವೆ ನಮ್ಮ ಬದುಕಿನ ಬ್ರಹ್ಮರಾಗಬೇಕು.
ಇವತ್ತಿಗೆ ಇಸ್ಟು ಸಾಕು. ಲೆಟ್ಸ್ ವಿಷ್ ಯು.. ಹ್ಯ್ವಾವ್ ಅ ಗ್ರೇಟ್ ದಿನ...
ನಿಮ್ಮ ,
ಚುಕ್ಕಿ...
Wednesday, June 11, 2014
ಯಾರನ್ನೆ ಆದರು ಅತಿಯಾಗಿ ಹಚ್ಚಿಕೊಳ್ಳಬಾರದು...
ನಮಸ್ತೆ ಸ್ನೇಹ ಕುಸುಮಗಳಿಗೆ, ಬೆಳಗಿನ ಶುಭಾರಂಬಕ್ಕೆ ನನ್ನ ಗುಡ್ ಲಕ್.
ನಿಮ್ಮ ,
ಚುಕ್ಕಿ..
ಬಿಂದುವಿನಿಂದ ಅನಂತದೆಡೆಗೆ....
ಪ್ರತಿ ದಿನ ಇನ್ನು ಮುಂದೆ ನನಗನಿಸುವ, ನನ್ನ ಅನುಭವಕ್ಕೆ ಸಿಕ್ಕ ಒಂದೆರಡು ಸಾಲುಗಳನ್ನು ತಮ್ಮ ಮುಂದೆ ಹಂಚಿಕೊಳ್ಳುವ ಅಂತ ಮನಸ್ಸು ಯೋಚಿಸುತ್ತಿದೆ. ಈ ಬೆಳಗಿನ ತಂಪಾದ ಶುಭಹಾರೈಕೆಗಳೊಂದಿಗೆ ನಿಮ್ಮ ದಿನ ಸುಖಮಯವಾಗಿರಲಿ, ಬದುಕು ಸುಂದರವಾಗಲಿ ಎಂಬುದು ನನ್ನ ಅಭಿಲಾಷೆ.
ಆತ್ಮಿಯರೆ ಯಾರನ್ನೆ ಆದರು ಅತಿಯಾಗಿ ಹಚ್ಚಿಕೊಳ್ಳಬಾರದು. ಅವರ ಈ ಅವಲಂಬನೆ ಅತಿ ಎನಿಸುವ ಕಾಳಜಿ, ಪ್ರೀತಿ ಅಥವಾ ಮತ್ತಿನ್ನೇನೋ ಅಗಿರಬಹುದು, ಅದು ಸುಳ್ಳು, ನಾಟಕ ಅಂತೆನಿಸಿದರೆ ಅದರಿಂದ ಆಗುವ ದು:ಖ , ವೇದನೆ ಅಪಾರ. ಹಾಗಾಗಿ ಎಲೆಯ ಮೇಲಿರುವ ಮಂಜಿನ ಹನಿಯಂತೆ ಕೆಲವರ ಹತ್ತಿರ ನಮ್ಮ ಸಂಬಂಧಗಳಿರಬೇಕು. ಇದೇನು ಯೂನಿವರ್ಸಲ್ ಸತ್ಯ ಅಲ್ಲ. ಆದರೆ ಕೆಲವರಿಗೆ ಅನುಭಕ್ಕೆ ಬಂದಿರುತ್ತದೆ. ಅವರವರ ಭಾವಕ್ಕೆ, ಅವರವರ ಬಕುತಿಕೆ.
ಒಕ್... ಲೆಟ್ಸ್ ಚಿಯರ್ಸ್ ಶುಭ ಗುರುವಾರ,.... ಎನ್ ಜಾಯ್....ಹ್ಯಾವ್ ಅ ಗ್ರೇಟ್ ದಿನ..
ನಿಮ್ಮ ,
ಚುಕ್ಕಿ..
ಬಿಂದುವಿನಿಂದ ಅನಂತದೆಡೆಗೆ....
Wednesday, February 5, 2014
Wednesday, January 1, 2014
ಹೊಸ ದಿನಗಳನ್ನು ಸ್ವಾಗತಿಸೋಣ
ಆತ್ಮೀಯ ಬಂಧುಗಳೇ ಹೊಸ ವರ್ಶದ ಮೊದಲ ದಿನದ ಹಾಯ್,ಹಲೋ,ನಮಸ್ಕಾರ ಅಂಡ್ ಹೊಸ ವರ್ಶಕ್ಕೆ ತಮ್ಮೆಲ್ಲರಿಗು ಸ್ವಾಗತ ,ಶುಭ ಹಾರೈಕೆಗಳು.
ಜನ್ಮದಿನ, ಹಳೆ ವರ್ಷದ ಕೊನೆಯ ದಿನ, ಹೊಸ ವರ್ಶದ ಮೊದಲ ದಿನ, ಪ್ರೀತಿ ಅರಳಿದ ದಿನ,ಪ್ರೇಮದ ಬೀಳ್ಕೋಡಿಗೆಯ ದಿನ, ಬಾಳ ಸಂಗಾತಿಯನ್ನು ನೋಡಿದ ದಿನ, ಮದುವೆಯ ದಿನ, ಮೊದಲ ಮಿಲನದ ದಿನ, ಮಕ್ಕಳು ಹುಟ್ಟಿದ ದಿನ, ಅವರ ಸಾಧಿಸಿದ ಯಾವುದೋ ದಿನ, ಆತ್ಮೀಯರು ಅಗಲಿದ ದಿನ, ಹಬ್ಬದ ದಿನ..................ಅಬ್ಬಾ! ಎಸ್ಟೊಂದು ದಿನಗಳು ನಮ್ಮ ಬದುಕಿನಲ್ಲಿ ನೆನಪಾಗಿ ಉಳಿಯಲಿಕ್ಕೆ ಬರುತ್ತವೆ ಅಲ್ವಾ?!
ಆತ್ಮಿಯರೆ ನಿಮ್ಮ ಬದುಕಿನ ಸುಂದರ ನೆನಪುಗಳಲ್ಲಿ ಈ ಹೊಸ ವರ್ಶದ ಮೊದಲ ದಿನವು ಸೇರಲಿ. ನೀವು ಬಯಸಿದ ಅವಕಾಶಗಳು ನಿಮಗೆ ಒಲಿದು, ನಿಮ್ಮ ಬದುಕಿನಲ್ಲಿ ಸಂಭ್ರಮ, ಸಾಧನೆ,ಸಂತಸ, ಸಂತೃಪ್ತಿ ನೆಲೆಯೂರಲಿ ಎಂದು ಅಪಾರ ಪ್ರೀತಿಯಿಂದ ಹಾರೈಸುತ್ತೇನೆ.
ಈ ಅಂತರ್ಜಾಲ ಯುಗದಲ್ಲಿ ಎಲ್ಲಾ ಶುಭ ಹಾರೈಕೆಗಳು ಮಿಂಚೆ/ವಾಟ್ಸುಪ್/ಸರ್ಕಲ್/ಸಾಮಾಜಿಕ ತಾಣಗಳು ಇತ್ಯಾದಿ ಮಾಧ್ಯಮಗಳಲ್ಲೆ ವಿನಿಮಯವಾಗುತ್ತವೆ. ಹೃದಯಕ್ಕೆ ಹತ್ತಿರವಾದ ಆತ್ಮೀಯರು ಮಾತ್ರ ಕರೆ ಮಾಡಿ ಕಳೆದ ಬದುಕಿನ ನೆನಪುಗಳ ಜೊತೆ ಹೊಸ ದಿನಗಳಿಗಾಗಿ ಅಕ್ಕರೆಯಿಂದ ಶುಭ ಹಾರೈಸುತ್ತಾರೆ. ನನ್ನ ಬದುಕಿನಲ್ಲಿ ಅಂತಹವರ ಪಟ್ಟಿ ದೊಡ್ಡದಿದೆ. ಅವರಿಗೆಲ್ಲರಿಗು ವಂದನೆಗಳು.
ನಮ್ಮ ಜಂಜಾಟದ ಬದುಕಿನಲ್ಲಿ ಕೆಲವು ಕ್ಷಣಗಳನ್ನಾದರು ನಮ್ಮ ಆತ್ಮಿಯರಿಗಾಗಿ ಮೀಸಲಿಡೋಣ ಎಂಬುದು ನನ್ನ ಮನದಾಳದ ಇಂಗಿತ. ಆಫ್ಕೋರ್ಸ್ ನೀವು ಇದನ್ನು ಪಾಲಿಸುತ್ತೀರಿ ಎಂದು ನಂಬುತ್ತೇನೆ ಹಾಗು ಪಾಲಿಸಲು ಮನವಿ ಮಾಡುತ್ತೇನೆ.
ಈ ವರ್ಶದಲ್ಲೂ ನನ್ನ ಬದುಕಿನ ಗೆಳೆತನದ ಅಂಗಳದಲ್ಲಿ ನಿಮ್ಮ ಹೆಜ್ಜೆಯಿರಲಿ. ಸವಿ ನುಡಿಯಿರಲಿ, ಶುಭ ಕಾಮನೆಗಳಿರಲಿ ಎಂದು ಪ್ರಾರ್ಥಿಸುತ್ತೇನೆ.
೨೦೧೩ ಕ್ಕೆ ಶುಭ ವಿದಾಯ ಹೇಳುತ್ತಾ ಹೊಸ ದಿನಗಳನ್ನು ಅಪಾರ ನೀರಿಕ್ಷೆ/ ಅಕ್ಕರೆಯಿಂದ ಸ್ವಾಗತಿಸೋಣ. ಬನ್ನಿ ಜೊತೆಗೂಡಿ.
ಕನಸುಗಳೊಟ್ಟಿಗೆ ಕೈ ಜೋಡಿಸಿ, ತಾರೆಗಳನ್ನು ಎಟುಕಿಸೋಣ..
ನಿಮ್ಮವ,
ಚುಕ್ಕಿ...
ಬಿಂದುವಿನಿಂದ ಅನಂತದೆಡೆಗೆ......
ಜನ್ಮದಿನ, ಹಳೆ ವರ್ಷದ ಕೊನೆಯ ದಿನ, ಹೊಸ ವರ್ಶದ ಮೊದಲ ದಿನ, ಪ್ರೀತಿ ಅರಳಿದ ದಿನ,ಪ್ರೇಮದ ಬೀಳ್ಕೋಡಿಗೆಯ ದಿನ, ಬಾಳ ಸಂಗಾತಿಯನ್ನು ನೋಡಿದ ದಿನ, ಮದುವೆಯ ದಿನ, ಮೊದಲ ಮಿಲನದ ದಿನ, ಮಕ್ಕಳು ಹುಟ್ಟಿದ ದಿನ, ಅವರ ಸಾಧಿಸಿದ ಯಾವುದೋ ದಿನ, ಆತ್ಮೀಯರು ಅಗಲಿದ ದಿನ, ಹಬ್ಬದ ದಿನ..................ಅಬ್ಬಾ! ಎಸ್ಟೊಂದು ದಿನಗಳು ನಮ್ಮ ಬದುಕಿನಲ್ಲಿ ನೆನಪಾಗಿ ಉಳಿಯಲಿಕ್ಕೆ ಬರುತ್ತವೆ ಅಲ್ವಾ?!
ಆತ್ಮಿಯರೆ ನಿಮ್ಮ ಬದುಕಿನ ಸುಂದರ ನೆನಪುಗಳಲ್ಲಿ ಈ ಹೊಸ ವರ್ಶದ ಮೊದಲ ದಿನವು ಸೇರಲಿ. ನೀವು ಬಯಸಿದ ಅವಕಾಶಗಳು ನಿಮಗೆ ಒಲಿದು, ನಿಮ್ಮ ಬದುಕಿನಲ್ಲಿ ಸಂಭ್ರಮ, ಸಾಧನೆ,ಸಂತಸ, ಸಂತೃಪ್ತಿ ನೆಲೆಯೂರಲಿ ಎಂದು ಅಪಾರ ಪ್ರೀತಿಯಿಂದ ಹಾರೈಸುತ್ತೇನೆ.
ಈ ಅಂತರ್ಜಾಲ ಯುಗದಲ್ಲಿ ಎಲ್ಲಾ ಶುಭ ಹಾರೈಕೆಗಳು ಮಿಂಚೆ/ವಾಟ್ಸುಪ್/ಸರ್ಕಲ್/ಸಾಮಾಜಿಕ ತಾಣಗಳು ಇತ್ಯಾದಿ ಮಾಧ್ಯಮಗಳಲ್ಲೆ ವಿನಿಮಯವಾಗುತ್ತವೆ. ಹೃದಯಕ್ಕೆ ಹತ್ತಿರವಾದ ಆತ್ಮೀಯರು ಮಾತ್ರ ಕರೆ ಮಾಡಿ ಕಳೆದ ಬದುಕಿನ ನೆನಪುಗಳ ಜೊತೆ ಹೊಸ ದಿನಗಳಿಗಾಗಿ ಅಕ್ಕರೆಯಿಂದ ಶುಭ ಹಾರೈಸುತ್ತಾರೆ. ನನ್ನ ಬದುಕಿನಲ್ಲಿ ಅಂತಹವರ ಪಟ್ಟಿ ದೊಡ್ಡದಿದೆ. ಅವರಿಗೆಲ್ಲರಿಗು ವಂದನೆಗಳು.
ನಮ್ಮ ಜಂಜಾಟದ ಬದುಕಿನಲ್ಲಿ ಕೆಲವು ಕ್ಷಣಗಳನ್ನಾದರು ನಮ್ಮ ಆತ್ಮಿಯರಿಗಾಗಿ ಮೀಸಲಿಡೋಣ ಎಂಬುದು ನನ್ನ ಮನದಾಳದ ಇಂಗಿತ. ಆಫ್ಕೋರ್ಸ್ ನೀವು ಇದನ್ನು ಪಾಲಿಸುತ್ತೀರಿ ಎಂದು ನಂಬುತ್ತೇನೆ ಹಾಗು ಪಾಲಿಸಲು ಮನವಿ ಮಾಡುತ್ತೇನೆ.
ಈ ವರ್ಶದಲ್ಲೂ ನನ್ನ ಬದುಕಿನ ಗೆಳೆತನದ ಅಂಗಳದಲ್ಲಿ ನಿಮ್ಮ ಹೆಜ್ಜೆಯಿರಲಿ. ಸವಿ ನುಡಿಯಿರಲಿ, ಶುಭ ಕಾಮನೆಗಳಿರಲಿ ಎಂದು ಪ್ರಾರ್ಥಿಸುತ್ತೇನೆ.
೨೦೧೩ ಕ್ಕೆ ಶುಭ ವಿದಾಯ ಹೇಳುತ್ತಾ ಹೊಸ ದಿನಗಳನ್ನು ಅಪಾರ ನೀರಿಕ್ಷೆ/ ಅಕ್ಕರೆಯಿಂದ ಸ್ವಾಗತಿಸೋಣ. ಬನ್ನಿ ಜೊತೆಗೂಡಿ.
ಕನಸುಗಳೊಟ್ಟಿಗೆ ಕೈ ಜೋಡಿಸಿ, ತಾರೆಗಳನ್ನು ಎಟುಕಿಸೋಣ..
ನಿಮ್ಮವ,
ಚುಕ್ಕಿ...
ಬಿಂದುವಿನಿಂದ ಅನಂತದೆಡೆಗೆ......
Thursday, February 9, 2012
ಭರವಸೆಯಿರಲಿ ಬದುಕಿನಲಿ ,
ಡಿಯರ್ ಪ್ರೆಂಡ್ಸ್, ಜಗತ್ತಿನಲ್ಲಿ ಯಾವುದು ಅಸಾದ್ಯವಲ್ಲ. ಅಸಾದ್ಯಗಳನ್ನೆಲ್ಲ ಸಾಧ್ಯವಾಗಿಸಿದ ಹಲವು ಸಾಮಾನ್ಯರಾದ
ಅಸಮಾನ್ಯ ವ್ಯಕ್ತಿಗಳು ನಮ್ಮ ನಡುವೆ ಇದ್ದಾರೆ. ಹನುಮಂತ ಲಂಕೆಗೆ ಹಾರಲು ಮೊದಮೊದಲು ಅಂಜುತ್ತಿದ್ದ,
ಆ ಸಂದರ್ಬದಲ್ಲಿ ಜಾಂಬವಂತ ಎಂಬ ಕರಡಿ ಅವನ ಶಕ್ತಿ ಸಾಮರ್ಥ್ಯಗಳನ್ನು ಅವನಿಗೆ ತಿಳಿಸಿ, ಹುರಿದುಂಬಿಸಿದಾಗ ಅವನು
ಸಮುದ್ರವನ್ನು ಹಾರಿದ.
ಭರವಸೆಯಿರಲಿ ಬದುಕಿನಲಿ ,
ಅದೊಂದಿದ್ದರೆ ಸಾಕು , ಜೊತೆಗೆ ಬರುವುದು ಎಲ್ಲವು ,
ಅಮವಾಸೆ ನಂತರ ಹುಣ್ಣಿಮೆ ಬರಲೇಬೇಕು,
ಕತ್ತಲೆಯೇ ಉತ್ತರವಲ್ಲ ನಿಮ್ಮೆಲ್ಲ ಪ್ರಶ್ನೆಗಳಿಗೆ,
ಪರಿಹಾರವಿಲ್ಲದ ಸಮಸ್ಯೆಗಳೇ ಇಲ್ಲ ಈ ಜಗದಲಿ,
ಶ್ರೀ ಕೃಷ್ಣ ಹೇಳಲಿಲ್ಲವೇ ಆದದ್ದೆಲ್ಲ ಒಳಿತೆ ಆಯಿತೆಂದು ,
ಭರವಸೆಯಿರಲಿ ಬದುಕಿನಲಿ,
ಸೂರ್ಯ ಮುಳುಗಿದ ನಂತರ ಚುಕ್ಕಿಗಳು ,ಬೆಳಗುವುದಿಲ್ಲವೇ ಭುವಿಯ,
ಎಂತೆನ್ತಹವರು ಇರುವರು ಜಗದಲಿ,
ಮಾಡಿಹರು ಅಪ್ರತಿಮ ಸಾಧನೆಯ ,ಎಲ್ಲ ವೈರುದ್ಯಗಳ ನಡುವೆ,
ಅಂಜುವೆ ಏಕೆ ಮನವೇ,
ಇರುವ ಅವಕಾಶಗಳ ಬಳಸಿಕೋ,
ಎದೆಯನ್ನು ಉಕ್ಕಾಗಿಸಿ ,ಬುದ್ದಿಶಕ್ತಿಯ ಅಸ್ತ್ರ ಬಳಸಿ ,
ವಿಧಿಗೆ ಸವಾಲೆಸಿ.
ಯಾವುದು ಅಸಾದ್ಯವಲ್ಲ ಈ ಜಗದಲಿ,
ಭರವಸೆಯಿರಲಿ ಈ ಬದುಕಿನಲಿ,
ನಂಬಿಕೆಯಿರಲಿ ನಿನ್ನ ಶಕ್ತಿ ,ಸಾಮರ್ಥ್ಯಗಳಲಿ,
ಬದುಕಾಗಲಿ ನೀ ಬಯಸಿದಂತೆ,
ಬಾಳು ಬೆಳಕಾಗಲಿ.
Wednesday, May 25, 2011
"ಸಾವು" ಎಂಬ ಮಾಯದ ಬೆನ್ನೇರಿ...!!!
ಪ್ರತಿಯೊಬ್ಬರ ಬದುಕಿನಲ್ಲಿ ಬಹಳಷ್ಟು ಅವಕಾಶಗಳು, ಆಯ್ಕೆಗಳಿವೆ . ಹಾಗೆ ಬದುಕಲೂ ಕೂಡ. ಆದರೆ ವಿಧಿಯು ಎಲ್ಲ ಆಯ್ಕೆ, ಅವಕಾಶಗಳನ್ನು ಕಸಿದುಕೊಂಡು "ಸಾವು" ಎಂಬ ಎರಡಕ್ಷರದ ನೋವನ್ನು ಬಡವರ ಪಾಲಿಗೆ ಬಳುವಳಿಯಾಗಿ ನೀಡಿದರೆ, ಅದಕ್ಕಿಂತ ದೊಡ್ಡ ಶಿಕ್ಷೆ ಮತ್ತೊಂದಿಲ್ಲ.
ನನ್ನ ಪ್ರಕಾರ "ಸಾವು" ಮನುಷ್ಯನನ್ನು ಪರಿಪೂರ್ಣನಾಗಿಸುತ್ತದೆ. ಬದುಕಿನ ಎಲ್ಲಾ ಮಗ್ಗಲುಗಳನ್ನು ಬದಲಿಸಿ ನೆಮ್ಮದಿಯಾಗಿ ಸಾಯುವ ಮನುಷ್ಯ ನಿಜಕ್ಕೂ ಪರಿಪೂರ್ಣ. ಸಾವು ಎಂಬ ಮಾಯೆ ಯ ಹಿಂದೆ ಎಲ್ಲವು ಶೂನ್ಯ. ಸಾವು ಎಂಬುದರ ಅನುಭವವೇ ಇಲ್ಲದ ಹಾಗೆ ಸತ್ತು ಬಿಡಬೇಕು. ರಾತ್ರಿ ನಿದ್ರೆ ಮಾಡುತ್ತಿರುವಾಗ, ಅಮ್ಮಾಳ ತೊಡೆಯಲ್ಲಿ ತಲೆ ಇತ್ತು ಮಲಗಿರುವಾಗ, ಸಂಗಾತಿಯ ಅಪ್ಪುಗೆಯಲ್ಲಿ, ಮಕ್ಕಳ ಮುದ್ದಾಟದಲ್ಲಿ ,ದೇವರನ್ನು ಪ್ರಾರ್ಥಿಸುವಾಗ , ನಮಗೆ ಗೊತ್ತಾಗದ ಹಾಗೆ ಸಾವು ನಮ್ಮನ್ನ ಆವರಿಸಬೇಕು. ಆದರೆ ಸಾವು ಎಂಬ ರಕ್ಕಸ ದೈತ್ಯ ರೂಪ ತಾಳಿ , ನಮ್ಮನ್ನ ಅಟ್ಟಾಡಿಸಿ, ದೇಹವನ್ನು ಕೃಶವಾಗಿಸಿ, ಮನಸ್ಸನ್ನು ಕುಗ್ಗಿಸಿ, ಭಯ ಹುಟ್ಟಿಸಿ ನಮ್ಮನ್ನ ಆವರಿಸಿದರೆ, ಅಬ್ಬಾ..! ಅದಕ್ಕಿಂತ ದೊಡ್ಡ ನರಕ ಮತ್ತೊಂದಿಲ್ಲ.
ನಮ್ಮ ಮನೆಯ ಹಿರಿಕ , ನನ್ನ ದೊಡ್ಡಪ್ಪ ಸಾವಿನ ದಿನಗಳನ್ನು ಎಣಿಸುತ್ತಾ, ಹಾಸಿಗೆಯಲ್ಲಿ ಕೃಶವಾಗಿ ಮಲಗಿದ್ದಾನೆ. ಅವರ ದೇಹದ ಎರಡು ಮೂತ್ರ ಜನಕಾಂಗಗಳು (ಕಿಡ್ನಿ)
Thursday, September 30, 2010
"ಹಸಿವು ಬದುಕಿನ ಪಾಟ ಕಲಿಸುತ್ತವೆ, ಕಷ್ಟಗಳು ಸಾಧನೆಗೆ ಮುನ್ನುಡಿ ಹಾಡುತ್ತವೆ".
"ಹಸಿವು ಬದುಕಿನ ಪಾಟ ಕಲಿಸುತ್ತವೆ, ಕಷ್ಟಗಳು ಸಾಧನೆಗೆ ಮುನ್ನುಡಿ ಹಾಡುತ್ತವೆ". ಈ ಸಾಲನ್ನು ನಾನು ಬರೆಯಲಿಕ್ಕೆ ಸಾಧ್ಯವಾದುದು , ಒಬ್ಬ ಬಿಹಾರಿ ಮಿತ್ರನ ಅನುಭವದಿಂದ.
ಚರಿತ್ರೆ (ಇತಿಹಾಸ ) ವುಳ್ಳ , ಚಾರಿತ್ರ್ಯ ವಿಲ್ಲದ ರಾಜ್ಯ ಬಿಹಾರ .ಬಿಹಾರ ಭಾರತೀಯ ಇತಿಹಾಸಕ್ಕೆ ತನ್ನದೇ ಆದ ಕೊಡುಗೆ ನೀಡಿದೆ. ಹಾಗೆಯೇ ಕ್ರೌರ್ಯ ಮತ್ತು ತನ್ನ ಅಸಂಸ್ಕೃತಿ ಯಿಂದ ಮನೆಮಾತಾಗಿದೆ . ಆದರೂ ಅಲ್ಲಿನ ಜನ ದೇಶದ ಅತ್ಯುನ್ನತ ಹುದ್ದೆಗಳಾದ ನಾಗರಿಕ ಸೇವೆಗಳನ್ನು ಅಲಂಕರಿಸುತ್ತಿದ್ದಾರೆ. ರೈಲ್ವೆ ಇಲಾಖೆಯಲ್ಲಿ ತುಂಬಿ ತುಳುಕುತ್ತಿದ್ದಾರೆ. ಬಿಹಾರ ರಾಜ್ಯದಲ್ಲಿ ಯಾವ ಹೊತ್ತು ಯಾವ ಅನಾಹುತ ಘಟಿಸುತ್ತದೋ ಹೇಳಲಿಕ್ಕಾಗದು. ಶೇ 85 ರಷ್ಟು ಹಳ್ಳಿಗಳು ಬಿಹಾರವನ್ನು ಆವರಿಸಿವೆ. ಹಿಂದುಳಿದ ರಾಜ್ಯ . ಇಸ್ಟೆಲ್ಲಾ ಇದ್ದು ಇದೆಲ್ಲ ಬಿಹಾರಿಗಳಿಗೆ ಸಾದ್ಯವಾದುದಾದರೂ ಹೇಗೆ ?!
ನನ್ನ ಬಿಹಾರಿ ಗೆಳೆಯ ಕೊಟ್ಟ ಉತ್ತರ ಇಸ್ಟೇ ," ಡಿಯರ್ ಪ್ರೆಂಡ್ ಬಿಹಾರದಲ್ಲಿ ವಿದ್ಯುತ್ ಪೂರೈಕೆ ಸರಿ ಇಲ್ಲ ಅಂಡ್ ಇಟ್ ಇಸ್ ನಾಟ್ ಎ ಕಲ್ಚರಡ್ ಸ್ಟೇಟ್ . ಜನಗಳ ಬಳಿ ದುಡ್ಡಿಲ್ಲ. ಮೂರು ನಾಲ್ಕು ಜನ ಯೂಥ್ಸ್ ಒಂದು ಕಡೆ ಸೇರಿ ಓದಿಕೊಳ್ತೇವೆ. ಸ್ಪರ್ದಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸ್ತೇವೆ. ಎಲ್ಲಾ ತರದ ಪರೀಕ್ಷೆ ತಕ್ಕೊಲ್ತೆವೆ. ಮೊದಲನೇ ಸಲ ಆಗದೆ ಇದ್ದರೆ , ಎರಡು ಅಥವಾ ಮೂರನೇ ಪ್ರಯತ್ನದಲ್ಲಿ ವಿಜಯ ನಮಗೊಲಿಯುತ್ತದೆ. ಹೊಟ್ಟೆ ತುಂಬಿದರೆ ಯಾವ ಯೋಚನೆ ಕೂಡ ತಲೆಗೆ ಹತ್ತದು. ಮನರಂಜನೆ ಇದ್ದರೆ ಯಾವ ಚಿಂತೆ ಕೂಡ ಸುಳಿಯದು. ಇದು ಯಾವುದು ಬಿಹಾರದಲ್ಲಿಲ್ಲ. ಅಸ್ಟೊಂದು ಸಮಯ ಏನ್ ಮಾಡೋದು.... ಪ್ರಿಪೇರ್ , ಪ್ರಿಪೇರ್ ,ಪ್ರಿಪೇರ್ ಅಂಡ್ ವೀ ಗಾಟ್ ಸಕ್ಸೆಸ್ ."
ನಿಜಕ್ಕೂ ಆತನ ಮಾತು ನನ್ನಲ್ಲಿ ಸ್ಫೂರ್ತಿ ತುಂಬಿತು. ಎಲ್ಲಾ ಸರಿಯಿದ್ದೂ ಸಾಧಿಸುವವರೇ ವಿರಳ . ಅಂತದ್ದರಲ್ಲಿ ತಮ್ಮ ರಾಜ್ಯದ ದೌರ್ಭಾಗ್ಯವನ್ನು ,ದುರ್ಬಲತೆಯನ್ನು ಹಳಿಯದೆ ಅದನ್ನೇ ಸಕಾರಾತ್ಮಕವಾಗಿ ತೆಗೆದುಕೊಂಡು ಸಾಧಿಸಿದ್ದಾರೆ . ನಾವು ಕೂಡ ಅದೆ ಹಾದಿಯಲ್ಲಿ ಸಾಗೋಣ. ಸಾಧನೆಯ ಹಾದಿಗೆ ನಮ್ಮ ಕರ್ನಾಟಕ ಪೂರಕವಾಗಿದೆ. ಆದರೆ ನಮ್ಮ ಮನಸ್ಸುಗಳು ಬದಲಾಗಬೇಕಿದೆ. ಕನ್ನಡ ಭಾಷೆಯ ಪ್ರೇಮದೊಟ್ಟಿಗೆ ಇತರ ಭಾಷೆಯ ಜ್ಞಾನ ವನ್ನು ಮೈ ಗೂಡಿಸಿಕೊಳ್ಳೋಣ. ಬೆಳೆಯೋಣ. ಈ ಜಗಕೆ ಬೆಳಕಾಗೋಣ.
ನಿಜಕ್ಕೂ ಆತನ ಮಾತು ನನ್ನಲ್ಲಿ ಸ್ಫೂರ್ತಿ ತುಂಬಿತು. ಎಲ್ಲಾ ಸರಿಯಿದ್ದೂ ಸಾಧಿಸುವವರೇ ವಿರಳ . ಅಂತದ್ದರಲ್ಲಿ ತಮ್ಮ ರಾಜ್ಯದ ದೌರ್ಭಾಗ್ಯವನ್ನು ,ದುರ್ಬಲತೆಯನ್ನು ಹಳಿಯದೆ ಅದನ್ನೇ ಸಕಾರಾತ್ಮಕವಾಗಿ ತೆಗೆದುಕೊಂಡು ಸಾಧಿಸಿದ್ದಾರೆ . ನಾವು ಕೂಡ ಅದೆ ಹಾದಿಯಲ್ಲಿ ಸಾಗೋಣ. ಸಾಧನೆಯ ಹಾದಿಗೆ ನಮ್ಮ ಕರ್ನಾಟಕ ಪೂರಕವಾಗಿದೆ. ಆದರೆ ನಮ್ಮ ಮನಸ್ಸುಗಳು ಬದಲಾಗಬೇಕಿದೆ. ಕನ್ನಡ ಭಾಷೆಯ ಪ್ರೇಮದೊಟ್ಟಿಗೆ ಇತರ ಭಾಷೆಯ ಜ್ಞಾನ ವನ್ನು ಮೈ ಗೂಡಿಸಿಕೊಳ್ಳೋಣ. ಬೆಳೆಯೋಣ. ಈ ಜಗಕೆ ಬೆಳಕಾಗೋಣ.
Friday, August 20, 2010
*....ಅಂದು ನಾನು ಮಗುವಾಗಿದ್ದೆ..ಈಗ ಮಗುವಿನ ತಂದೆ ...*
![]() |
ಇವಿಸ್ಟೇ ಅಲ್ಲ ನನ್ನ ಬಾಲ ಲೀಲೆಗಳು ಅಪಾರ. ಅವೆಲ್ಲವನ್ನು ಈಗ ನೆನಪಿಸಿಕೊಂಡಾಗ ಅವೆಲ್ಲ ಬದುಕಿನ ಮೇಸ್ಟ್ರು ಗಳಾಗಿವೆ, ಅವುಗಳಿಂದ ಕಲಿಯುವುದು ಬಹಳಸ್ಟಿದೆ. ಆದರೆ ನಾವು ದೊಡ್ಡವರಾಗುತ್ತಾ ಹೋದ ಹಾಗೆ ನಮ್ಮೊಳಗಿನ " ಮಗು" ವನ್ನು ಕೊಂದುಬಿಡುತ್ತೇವೆ ಏನೋ ಅನ್ನಿಸುತ್ತದೆ.
ಇಸ್ಟೆಲ್ಲಾ ನೆನಪಾಗಿದ್ದು, ನನ್ನ ಮುದ್ದು ಕಂದಮ್ಮ " ಹಿಮಘ ತೇಜಸ್ " ನ ತುಂಟಾಟಗಳನ್ನು ನೋಡಿ. 8 ತಿಂಗಳ ಮನುಷ್ಯ......! , ಹಾಸಿಗೆಯಲ್ಲಿಯೇ ಈಜುತ್ತಾನೆ,ಪಟ ಪಟ ಕೈ ಕಾಲು ಬಡಿದು ಡ್ಯಾನ್ಸ್ ಮಾಡುತ್ತಾನೆ, ಮುಖಕ್ಕೆ ಹತ್ತಿರ ಇಟ್ಟು ಕೊಂಡರೆ ಕೆನ್ನೆಗೆ ರಪ ರಪ, ಹಲ್ಲೆ ಹುಟ್ಟಿಲ್ಲದ ಬಾಯಿಯಲ್ಲಿ, ತಾ ತಾ, ಆ...ಮ... ,ಆಮ್...,ಕೀ..........ಮತ್ತು ಅವನದೇ ಸಂಗೀತ ಹೇಳುತ್ತಾನೆ, ರಾಮ ರಾಮ ಎಂದು ನಾವು ಹೇಳಿದರೆ ಅವನು ಪುಟ್ಟ ಎರಡು ಕೈಗಳನ್ನು ಒಂದಕ್ಕೊಂದು ಬಡಿಯುತ್ತಾ ಭಜನೆ ಮಾಡುತ್ತಾನೆ....8 ತಿಂಗಳ ಮನುಷ್ಯ ....!
ಅಬ್ಬಾ.. ಎಂತಹ ಮುಗ್ದ ನಗು, ತುಂಟಾಟ...! ಇಂದು ನಾನು ಅಪ್ಪನಾಗಿದ್ದೇನೆ, ಅಪ್ಪನಾದ ಮೇಲೆ ನಾನೇ ಮಗುವಾಗಿದ್ದೇನೆ, ನನ್ನ ಮಗ ತುಂಟ ನಗೆ ಬೀರುತ್ತಿದ್ದಾನೆ, ಯಾವುದರ ಮುನ್ಸೂಚನೆಯೋ, ನನ್ನಪ್ಪ ನೆನಪಾಗುತ್ತಿದ್ದಾರೆ......!!!!!
Friday, August 13, 2010
ಒಂದು ಲೇಖನಿ,ಹಲವು ಕಾಲಿ ಕಾಗದಗಳು, ಮತ್ತು ನಾನು...!!!
ಡಿಯರ್ ಪ್ರೆಂಡ್ಸ್ ನಮಸ್ತೆ,
ಪ್ರತಿ ಕ್ಷಣ ಬದುಕನ್ನ, ಈ ಪ್ರಪಂಚವನ್ನ ಮತ್ತು ನನ್ನನ್ನ ಪ್ರೀತಿಸುವ ಮನುಷ್ಯ ನಾನು. "ನನ್ನನ್ನ ನಾನು ಪ್ರೀತಿಸುವುದಕ್ಕೆ ಸಾಧ್ಯ ಆದರೆ ಇಡೀ ಜಗತ್ತನ್ನು ಮತ್ತು ಮಿಕ್ಕೆಲ್ಲವನ್ನೂ ಪ್ರೀತಿಸಬಹುದು" ಎಂಬುದು ನನ್ನ ನಂಬಿಕೆ. ಈ ಪ್ರೀತಿಯ ಯಾನದಲ್ಲಿ ನೂರಾರು ಭಾವಗಳು ನನ್ನನ್ನ ಪುಳಕಿತವನ್ನಗಿ ಮಾಡಿವೆ. ಆತ್ಮ ಶಕ್ತಿ ಮತ್ತು ಆತ್ಮ ಗೌರವಗಳೇ ನನ್ನ ಶಕ್ತಿ. ಇವು ಕೆಲವರಿಗೆ ಸಾಧನೆಯಾಗಿ, ಮತ್ತೆ ಕೆಲವರಿಗೆ ಸ್ಪೂರ್ತಿಯಾಗಿ , ಕೆಲವರಿಗೆ ಅಹಂಕಾರವಾಗಿ ಕಂಡಿವೆ. ಅವರವರ ಭಾವಕ್ಕೆ ಅವರವರ ಪ್ರೀತಿಗೆ " ನನ್ನ ಕನ್ನಡಿಯ ಬಿಂಬ " ಕಂಡಿದೆ. ಆದರೆ ನನಗನಿಸುವುದಿಸ್ಟೇ . ನನ್ನ ಬಳಿ ಹಲವು ಕಾಲಿ ಕಾಗದಗಳಿವೆ , ಒಂದು ಲೇಖನಿ ಇದೆ ಮತ್ತು ನಾನಿದ್ದೇನೆ.
ಹಾಗಾಗಿಯೇ ನನಗನಿಸಿದ ಭಾವನೆಗಳು, ನಾನು ಕಂಡು ಕೊಂಡ ಸತ್ಯಗಳು, ನನ್ನ ಅನುಭವಕ್ಕೆ ನಿಲುಕಿದ ಸಂಗತಿಗಳನ್ನು " ವಿಶ್ವಮುಖಿ " ಯಾಗಿ ಇಲ್ಲಿ ದಾಖಲಿಸುತ್ತಿದ್ದೇನೆ. ನಿಮಗನಿಸಿದ್ದನ್ನು ಖಂಡಿತ ತಿಳಿಸಿ. ತಿಳಿಯುವುದು , ಬೆಳೆಯುವುದು, ಗೊತ್ತಿರುವುದ ಹಂಚಿಕೊಳ್ಳುವುದು, ಜೊತೆಗೂಡಿ ನಡೆಯುವುದು ವಿಶ್ವಮುಖಿಯ ಯಾನದ ಅವಿಬಾಜ್ಯ ಅಂಗಗಳು.
೦೧. ನಾನು ಸಮಾಧಾನಿಸುವವರೆಗಿನ ಕಣ್ಣೀರನ ಹೊಣೆ ನನ್ನದು. ನಂತರ ನೀ ಸುರಿಸುವ ಕಣ್ಣೀರಿಗೂ, ನನಗೂ ಸಂಬಂಧವಿಲ್ಲ. ನಮ್ಮ ಸಂಬಂಧದ ಅನೂನ್ಯತೆ ಇಸ್ಟೇ ಎಂದು ತಿಳಿಯುವೇನು.
೦೨. ಕೆಲವು ಸಂಕಟಗಳು/ನೋವುಗಳು ನಮ್ಮ ಗುರುಗಳು. ಅವು ನಮ್ಮನ್ನ ಅರ್ಥೈಸಿಕೊಳ್ಳಲು , ತಿದ್ದಿಕೊಳ್ಳಲು, ಮುನ್ನಡೆಯಲು ಅನುಕೂಲಕರ.
೦೩. ಪ್ರೀತಿ ಒಂದು ಕ್ರಿಯೆ ಅಲ್ಲ. ಅದು ನನಗೆ ಉಸಿರಾಟದಸ್ಟೇ ಸಹಜ .
೦೪. ಭಗ್ನ ಪ್ರೀತಿಯು ಕೂಡ ಸಾಧನೆಗೆ ಸ್ಪೂರ್ಥಿಯಾಗಬಲ್ಲದು.
Sunday, October 26, 2008
ವಿವೇಕ ಕಿಡಿ..ಸೇವೆಗೆ ಕರೆ
" ಐಶ್ವರ್ಯ ಹೀನರಾದ, ನಿರ್ಭಾಗ್ಯರಾದ , ವಿವೇಚನಾ ಶಕ್ತಿಯನ್ನು ಕಳೆದುಕೊಂಡು ಪದದಳಿತರಾದ, ಉಪವಾಸದಿಂದ ನರಳುವ, ಕಾದಾಡಿ ಅಸೂಯೆ ಪಡುವ ನಮ್ಮ ದೇಶದವರನ್ನು ಪ್ರೀತಿಸಿದರೆ, ಅವರು ಮತ್ತೊಮ್ಮೆ ಮೇಲೆ ಏಳುವರೆಂದು ನಾನು ನಂಬುತ್ತೇನೆ. ನೂರಾರು ಜನ ಉದಾರ ಹೃದಯರಾದ ಸ್ತ್ರೀ ಪುರುಷರು ಜೀವನದ ಸುಖ ವನ್ನು ಅನುಭವಿಸಬೇಕೆಂಬ ಆಸೆ ಎಲ್ಲವನು ತೊರೆದು, ಬಡತನ ಅಜ್ಞಾನ ಕೂಪದಲ್ಲಿ ದಿನೇ ದಿನೇ ಆಳ ಆಳಕ್ಕೆ ಮುಳುಗುತ್ತಿರುವ ನಮ್ಮ ನಾಡಿನ ಲಕ್ಷಾಂತರ ಜನರ ಹಿತಕ್ಕೊಸುಗವಾಗಿ ತವಕಿಸಿ ಯಾವಾಗ ಕೈಲಾದ ಮಟ್ಟಿಗೆ ಕಸ್ಟ ಪಡುವರೋ , ಆಗ ಮಾತ್ರ ಭರತ ಖಂಡ ಮೇಲೆ ಏಳುವುದು" ........ಸ್ವಾಮಿ ವಿವೇಕಾನಂದರು
ಪ್ರೀತಿಯ ಪುಟ್ಟು ,
ದೊಡ್ಡವರು ಹೇಳಿರೋ ಮಾತ್ ಗಳನ್ನೆಲ್ಲ ಕಾರ್ಯರೂಪಕ್ಕೆ ತಂದರೆ ಈ ಸಮಾಜ, ಪರಿಸರ, ನಮ್ಮ ಮನೆ - ಮನಸ್ಸು ಎಷ್ಟು ಚಂದ ಇರುತ್ತಲ್ವಾ...?! ಅದೇ ಪ್ರಯತ್ನದಲ್ಲಿ ನಮ್ಮ ಬದುಕಿನ ಗಾಲಿ ಚಲಿಸುತ್ತಿರಬೇಕು. ಏನಂತೀಯ..?!!!!!!!!
ಇತಿ,
ನಿನ್ನ ಚುಕ್ಕಿ
ದೊಡ್ಡವರು ಹೇಳಿರೋ ಮಾತ್ ಗಳನ್ನೆಲ್ಲ ಕಾರ್ಯರೂಪಕ್ಕೆ ತಂದರೆ ಈ ಸಮಾಜ, ಪರಿಸರ, ನಮ್ಮ ಮನೆ - ಮನಸ್ಸು ಎಷ್ಟು ಚಂದ ಇರುತ್ತಲ್ವಾ...?! ಅದೇ ಪ್ರಯತ್ನದಲ್ಲಿ ನಮ್ಮ ಬದುಕಿನ ಗಾಲಿ ಚಲಿಸುತ್ತಿರಬೇಕು. ಏನಂತೀಯ..?!!!!!!!!
ಇತಿ,
ನಿನ್ನ ಚುಕ್ಕಿ
Wednesday, May 28, 2008
ಚಿಕ್ಕ ಪುಟ್ಟ ಅಪಘಾತಗಳು ಆತ್ಮವಿಶ್ವಾಸವನ್ನು ಹೆಚ್ಸಿಸಲಿ ....ದೊಡ್ಡ ಆಘಾತಗಳನ್ನು ತಪ್ಪಿಸಲಿ..
ಪ್ರೀತಿಯ ಸಂಜೀವಿನಿ....ಹೇಗಿದ್ದಿಯ...?!
ನಾವು ಬಹಳಷ್ಟು ಬಾರಿ , " ಆ ಕೆಲಸಾನಾ , ಅದು ನನ್ನ ಕಾಲ ಕಿರು ಬೆರಳಿಗೂ ಸಮ ಇಲ್ಲ, ಮಾಡಿ ಬಿಸಾಕ್ತೇನೆ", ಹಾಗೆ, ಹೀಗೆ, ಅಂತಾ ಕೊರಳ ಪಟ್ಟಿಯನ್ನು ಮೇಲಕ್ಕೆ ಏರಿಸಿ ಬೊಬ್ಬೆ ಹೊಡೆಯುತ್ತಿರುತ್ತೇವೆ. ಹೃದಯಕ್ಕೆ ಮತ್ತು ಕಾಲ ಬೆರಳಿಗೆ ಅಜಗಜಾಂತರ ವ್ಯತ್ಯಾಸವನ್ನೇ ಕಲ್ಪಿಸಿಬಿಟ್ಟಿದ್ದೇವೆ. ನಮ್ಮ ದೇಹದ ಅಂಗಗಳಲ್ಲೇ ತಾರತಮ್ಯ ಮಾಡುವ ನಾವು " ಸಮಾನ ಸಮಾಜ" ವನ್ನ ಸೃಷ್ಟಿಸಲಿಕ್ಕಾದರೂ ಹೇಗೆ ಸಾದ್ಯ ಹೇಳು?! ಇರಲಿ ಬಿಡು,
ಮೊನ್ನೆ ಜೀವದ ಗೆಳೆಯ ರಾಘು ನ ಬಲ ಕಾಲಿನ ಪಾದದ ಮೇಲೆ ಬೆಂಗಳೂರಿನ ಸಿಟಿ ಬಸ್ಸೊಂದು ತನ್ನ ಚಕ್ರಗಳಿಂದ ಪಾದ ಪೂಜೆ ಮಾಡಿತು. ಬಲ ಕಾಲಿನ ಎರಡು ಬೆರಳುಗಳು ಪೂರ್ತಿ ಅಪ್ಪಚ್ಚಿಯಾದವು. ಇನ್ನೆರಡು ಬೆರಳುಗಳ ಮೂಳೆ ಮುರಿಯಿತು. ಸದ್ಯಕ್ಕೆ, 'ಹೆಬ್ಬೆರಳು' ಅವನ ಕಾಲಿನಲ್ಲಿದೆ. ಅವನನ್ನ ಆ ಸ್ಥಿತಿಯಲ್ಲ್ಲಿ ನೋಡುವವರೆವಿಗೂ ನನಗರ್ಥವಾಗಿರಲಿಲ್ಲ ನಮ್ಮ ದೇಹದ ಪ್ರತಿಯೊಂದು ಭಾಗವೂ ಎಸ್ಟು ಮುಖ್ಯ ಅಂತ.
'ಪುಟ್ಟು' ಈ ಸ್ಥೀಮಿತ ಅವಧಿಯ ಬದುಕಿನಲ್ಲಿ ಎಸ್ಟೊಂದು ಬಗೆಯ ಅಪಘಾತಗಳು ಸಂಭವಿಸುತ್ತವೆ ಅಲ್ವಾ?! ಮಾನಸಿಕವಾಗಿ...ದೈಹಿಕವಾಗಿ... ! ಎತ್ತಿ ಮುದ್ದಾಡಿದ ಅಮ್ಮಾಳ ಕೈಗಳಿಗೆ ಪ್ಯಾರಲಿಸಿಸ್ ಅಟ್ಯಕ್ಕ್ಆಗುತ್ತೆ, ಅಪ್ಪ ಸುಳಿವಿಲ್ಲದೆ ಸತ್ತು ಹೋಗ್ತಾನೆ, ಬೆಳೆದ ಮಗ ಅಪಘಾತ ದಲ್ಲಿ ತೀರಿ ಹೋಗ್ತಾನೆ, ಕೆಲವರು ಹಾದಿ ತಪ್ತಾರೆ, ಸಂಪತ್ತು ಕರಗಿ ಉತ್ತಮ ಅಂತಸ್ತಿನ ಜನರು ಬೀದಿಗೆ ಬೀಳ್ತಾರೆ, ನಂಬಿದ ಗೆಳೆಯ ಮೋಸ ಮಾಡಿ ಬಿಡ್ತಾನೆ, ಪ್ರೀತಿಸಿದ ಹುಡುಗಿಗೆ ಬೇರೆಯವನೋಟ್ಟಿಗೆ ಮದುವೆ ನಿಶ್ಚಯವಾಗಿರುತ್ತೆ, ಪರೀಕ್ಷೆಯಲ್ಲಿ ನಿರೀಕ್ಷೆಯ ಫಲಿತಾಂಶ ತಲೆ ಕೆಳಕಾಗಿರುತ್ತೆ, ಮುದ್ದು ನಾಯಿ ಮರಿ ಸತ್ತು ಹೋಗುತ್ತೆ, ಸಂಬಂದ ಗಳ ಸ್ವರೂಪವೇ ಬದಲಾಗಿಬಿಡುತ್ತೆ....ಅಬ್ಬಾ?!!!!!!!!!!! ನೆನೆಸಿಕೊಂಡರೆ ಮೈ ಜುಮ್ಮೆನ್ನುತ್ತದೆ. ಈ ಆಘಾತಗಳೇ ಬದುಕನ್ನ ಕುಬ್ಜ ಗೊಳಿಸುತ್ತವೆ..ಬದುಕಿನ ಪ್ರೀತಿಯನ್ನೇ ಬತ್ತಿಸಿಬಿಡುತ್ತವೆ.
ಪುಟ್ಟು, ಈ ಆಘಾತಗಳಿಗಿಂತ " ಬದುಕು" ದೊಡ್ದದಲ್ವಾ..?! ಅದು "ಅನಂತತೆಯ ಆಗರ", ಈ ಆಘಾತಗಳು , ಕ್ಷುಲ್ಲಕ , ಕ್ಷಣಿಕವಾದುವು..ಇಂತಹುಗಳಿಂದ ನಮ್ಮ ಜೀವನ ಪ್ರೀತಿಯನ್ನು, ಉತ್ಸಾಹ ಸಾಗರವನ್ನು ಬತ್ತಿಸಿಕೊಳ್ಳಬಾರದು..,ಜಾಗೃತರಾಗಬೇಕು ,ಅಂದಾಗ ಮಾತ್ರ ಸಂಭವಿಸುವ ದೊಡ್ಡ ದೊಡ್ಡ ಅಘಾತಗಳನ್ನ ತಪ್ಪಿಸ್ಲಿಕ್ಕೆ ಸಾದ್ಯ..ಇಂತಹ ಸಂಧರ್ಭ ಗಳಲ್ಲೇ ನಾವು ವಿಧಿ ಗೆ ಸವಾಲು ಎಸೆಯಬೇಕು....
Tuesday, April 29, 2008
ನಾವು ಆಗಬೇಕಾದದ್ದು....
ಪ್ರೀತಿಯ ಪುಟ್ಟು.......
ಅಪ್ಪಾಅಮ್ಮಂದಿರಿಗೆ ತಮ್ಮ ಮಕ್ಕಳ ಬಗ್ಗೆ ಎಸ್ಟೊಂದು ನೀರಿಕ್ಷೆಗಳಲ್ಲವಾ ?! ತನ್ನ ಮಗ/ಮಗಳು ಅದಾಗಬೇಕು, ಇದಾಗಬೇಕು,ಹಂಗಿರಬೇಕು,ಹಿಂಗಿರಬೇಕು.....ಅಬ್ಬಾ!, ತಮ್ಮ ಕರುಳ ಕುಡಿಗಳ ಬಗ್ಗೆ ಎಸ್ಟೊಂದು ಆಶಾಗೋಪುರ ಕಟ್ಟಿಕೊಂಡಿರ್ತಾರಲ್ವಾ ?! ಮಕ್ಕಳು ಅದನ್ನು ಜಾವಾಬ್ದಾರಿಯಾಗಿ ಸ್ವೀಕರಿಸಬೇಕು , ಆದರೆ ಒಮ್ಮೆಮ್ಮೆ ಅದೇ ಅವರಿಗೆ bandhana ವಾಗಿ ಬಿಡುತ್ತೆ....ಆದರೆ ಅವರ ಕನಸುಗಳನ್ನ ನನಸಾಗಿಸುವುದು ಮಕ್ಕಳ ಹೊಣೆಗಾರಿಕೆ ಯಾಗಿರ್ಬೇಕು ಅಲ್ವಾ? , " ಮಕ್ಕಳ ಸಣ್ಣ ಪುಟ್ಟ ಕನಸುಗಳಿಗಿಂತ, ಫೋಷಕರಿಗೆ ತಮ್ಮ ಮಕ್ಕಳ ಸುಂದರ ಭವಿಷ್ಯದ ಬಗೆಗೆ ಅಗಾಧ ಕಲ್ಪನೆಗಳಿರ್ತಾವೆ", ಅನ್ನೋದು ನನ್ನ ಭಾವನೆ...ನಿನಗೆ ಏನನ್ನಿಸುತ್ತದೆ ಪುಟ್ಟು?!
ಪುಟ್ಟು, ನಾವು ಏನಾಗಲು ಹೊರಟಿದ್ದೇವೆ?! ಸಾಧಿಸ್ತೇವೆ, ದೊಡ್ಡ ಅಂಕಿಯ ಸಂಬಳ ಪಡೀತೀವಿ, ಹೆಸರನ್ನು ಮಾಡ್ತೀವಿ...ಅದ್ರೆ ಎಲ್ಲೋ ಒಂದು ಕಡೆ , ನಮ್ಮ ಸಾಧನೆಗಳ ನಡುವೆ, ಬದುಕಿನ ಜಂಜಾಟಗಳ ನಡುವೆ "ನಮ್ಮತನ" ವನ್ನ ಉಳಿಸಿಕೊಳ್ಳಲು ಹೆಣಗಾಡ್ತೀವಿ , ಸ್ನೇಹಿತರನ್ನ ಮರಿತಿವಿ, ನಗುವುದನ್ನು ಮರಿತಿವಿ, ಈ ಯಾಂತ್ರಿಕೃತ ಬದುಕಿನ ಭಾಗ ವಾಗಿ ಹೋಗ್ತಿವಿ. ನಮ್ಮ ಸ್ವಂತಿಕೆ ಯನ್ನೇ ಉಳಿಸಿಕೊಳ್ಳುವುದು ಕಸ್ಟವಾಗುತ್ತೆ. ಇದರ ಎಲ್ಲದರಾಚೆಗೆ ಒಂದು "ಸುಂದರ ಬದುಕು" ಇದೆ , ಎಂಬುದರ ಕಲ್ಪನೆಯ ನಮಗೆ ಇರೋದಿಲ್ಲ.
ಆದ್ರೆ ಪುಟ್ಟು , ನಾವು ಹಾಗಿರೋದು ಬೇಡ. ಸ್ವಾರ್ಥಗಳಾಚೆಗಿನ , ಜಂಜಾಟ ಗಳಾಚೆಗಿನ , ಒಂದು "ಸುಂದರ ಬದುಕು" ಕಟ್ಟಿಕೊಳ್ಳೋಣ........../
ನನ್ನ್ನ ಗುರುವರ್ಯ , "ಡಿವಿಜಿ " ಯವರು ,ಹೇಳಿದ್ದು ಇದನ್ನೇ ಅಲ್ಲವೇ.........?!!!!!!!
"ಹುಲ್ಲಾಗು ಬೆಟ್ಟದಡಿ,
ಮನೆಗೆ ಮಲ್ಲಿಗೆಯಾಗು,
ಕಲ್ಲಾಗು ಕಸ್ಟ ಗಳ ಮಳೆಯ ವಿಧಿ ಸುರಿಯೆ,
ಬೆಲ್ಲ ಸಕ್ಕರೆಯಾಗು ,ಧೀನ ದುರ್ಬಲರಿಂಗೆ,
ಎಲ್ಲರೊಳಗೊಂದಾಗು ಮಂಕುತಿಮ್ಮ "
ಇದನ್ನ ನೀ ಮರೆತಿಲ್ಲ ತಾನೆ...?!..........ನಾವು ಆಗಬೇಕಾದದ್ದು ಇದೆ.....ಎಲ್ಲರೋಳಗೊಂದಾಗುವುದು......ನೀ ಜೋತೆಯಲ್ಲಿರು ಅಷ್ಟೆ .......!!!!!!!!!!
ಪ್ರೀತಿಯಿಂದ,
ಚುಕ್ಕಿ...
ಬಿಂದುವಿನಿಂದ ಅನಂತದೆಡೆಗೆ.....
Monday, April 28, 2008
ಪ್ರೀತಿಯಿಂದ......
ಆತ್ಮಿಯರೇ.........ನಮಸ್ತೆ.....
ನನ್ನ ದೃಷ್ಟಿಯಲ್ಲಿ " ಸಾಧನೆ " ಎಂದರೆ, ಅದು ಕೇವಲ ಬಾಹ್ಯ ಸಾಧನೆಗೆ ಸಂಬಂದಿಸಿದ್ದಲ್ಲ, ಅದು ಅಂತರಂಗಕ್ಕೂ ಅನ್ವಯಿಸುತ್ತದೆ. ಅಂತರಂಗ ಮತ್ತು ಬಹಿರಂಗ ಸಾಧನೆಗಳ ನಡುವೆ ಸಮತೋಲನ ಸಾದಿಸಿ, ಸಮಚಿತ್ತದ ಬದುಕು ನಡೆಸುವುದೇ "ಅನಂತದೆಡೆಗೆ ಪಯಣ" , ಅದೇ ಮುಕ್ತಿಯ ದಾರಿ. ಈ ನಿಟ್ಟಿನಲ್ಲಿ ಚುಕ್ಕಿ ಈಗ "ವಿಶ್ವಮುಖಿ "ಯಾಗಲು ಹೊರಟಿದ್ದಾನೆ......ಜೊತೆಯಲ್ಲಿ ನೀವಿರಿ........ಪ್ರಯಾಣ ಸಾರ್ಥಕವಾಗಲು.......//
ಅಪಾರ ಪ್ರೀತಿಯಿಂದ,
ನಿಮ್ಮವ,
ಚುಕ್ಕಿ....
ನಿಮ್ಮವ,
ಚುಕ್ಕಿ....
Subscribe to:
Posts (Atom)














